

Chetan Ahimsa: ನಟ ಚೇತನ್ (Actor Chethan kumar) ಒಂದೆರಡಲ್ಲ ಸಾಕಷ್ಟು ವಿವಾದಾತ್ಮಕ ಹೇಳಿಕೆ ಹುಟ್ಟುಹಾಕಿ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಏನೇ ಸುದ್ಧಿ ಹರಿದಾಡಿದರೂ ಅದಕ್ಕೆ ನಟ ಚೇತನ್ (Chetan Ahimsa) ಪ್ರತಿಕ್ರಿಯೆ ಇದ್ದೆ ಇರುತ್ತದೆ. ಇದೀಗ ನಟ ಚಂದ್ರಯಾನದ ಜೊತೆ ಮಲದ ಗುಂಡಿಯ ಫೋಟೋ ಶೇರ್ ಮಾಡಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.
ಚಂದ್ರಯಾನ-3 (Chandrayaan-3) ಯೋಜನೆ ಯಶಸ್ವಿಯಾಗಿದ್ದು, ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದಿದೆ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ, ಚಂದ್ರನ (Moon) ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಭಾರತ (India) ಆಗಿದೆ. ದೇಶವೇ ಖುಷಿಯಿಂದ ಕುಣಿದಾಡುವ ಹೊತ್ತಿನಲ್ಲಿ ನಟ ಚೇತನ್ ಅಹಿಂಸಾ, ದೇಶದ ವಾಸ್ತವವನ್ನು ತೆರೆದಿಡುವ ಪೋಸ್ಟ್ ಹಂಚಿಕೊಂಡು ಚಂದ್ರಯಾನವನ್ನು ಲೇವಡಿ ಮಾಡಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಚಂದ್ರಯಾನ 3 ಮಿಷನ್‌ನ ರಾಕೆಟ್ ಫೋಟೋ ಮತ್ತು ಮಲ ಹೊರುವ ಪದ್ಧತಿಯ ಮತ್ತೊಂದು ಮುಖವನ್ನು ಕೊಲಾಜ್ ಮಾಡಿ, “ವಾಸ್ತವ” ಎಂಬ ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಇನ್ನೂ ಮುಂದುವರಿಯುತ್ತಿರುವ ಮಲ ಹೊರುವ ಪದ್ಧತಿಯನ್ನು ಮೊದಲು ತೊಲಗಿಸಿ, ಅದರಿಂದ ಒಂದು ಸಮುದಾಯಕ್ಕೆ ಮುಕ್ತಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಚೇತನ್ ಲೇವಡಿ ಮಾಡಿದ್ದಾರೆ.
ಈ ಪೋಸ್ಟ್ ಗೆ ಕೆಲವು ನೆಟ್ಟಿಗರು ಚೇತನ್ ವಿರುದ್ಧ ಕಿಡಿ ಕಾರಿದ್ದು, ಇನ್ನು ಕೆಲವರು ಇದೇ ನಮ್ಮ ದೇಶದ ಕರಾಳ ವಾಸ್ತವ ಎಂದೂ ಕಾಮೆಂಟ್ ಮಾಡಿದ್ದಾರೆ. ಕೆಲವರು “ಅಯ್ಯೋ ಅತೃಪ್ತಾ ಆತ್ಮವೇ ಒಂದು ಕೆಲಸ ಮಾಡು ನೀನು ಸಿನಿಮಾ ರಂಗ ಬಿಡು ಆ ಸಿನಿಮಾದಲ್ಲಿ ಈ ಹುಡುಗನ ಹೀರೋ ಮಾಡು ನೀನು ಮೋರಿಯಲ್ಲಿ ಇಳಿದು ಈ ಕೆಲಸ ಮಾಡು ಅಲ್ಲಿಗೆ ಸಮಾನತೆ ಬಂತಲ್ಲೋ, ಅಯ್ಯೋ ಅತೃಪ್ತಾತ್ಮವೇ ನಿಂಗ್ ಯಾವಾಗ ಆತ್ಮತೃಪ್ತಿದ್ಯೋ
ನಿನ್ನಂತಹ ಸಾಮಾಜಿಕ ಜಾಲತಾಣದ ಶೂರರಿಂದಲೇ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೋರ್ವರು, “ಪ್ರತಿಯೊಬ್ಬ ದೇಶಭಕ್ತ ಚಂದ್ರಯಾನ 3 ಯಶಸ್ಸನ್ನು ಹಬ್ಬದ ರೀತಿ ಆಚರಿಸ್ತಿದ್ದಾರೆ. ಆದರೆ ನಿನ್ನಂತಹವರು ಪ್ರತಿಯೊಂದರಲ್ಲೂ ಕಲ್ಲು ಹುಡ್ಕ್ತೀರಲ್ಲ ನಿಮಗೆ ನಾಚಿಕೆ ಹಾಗೋದಿಲ್ವ ದೇಶ ಪ್ರತಿಯೊಂದಲ್ಲು ಪ್ರಗತಿ ಸಾಧಿಸಬೇಕು ಅದು ವಿಜ್ಞಾನ ಕ್ಷೇತ್ರದಲ್ಲಿ ಆಗಿರಲಿ ಬಡತನದಲ್ಲಿ ಆಗಿರಲಿ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಆಗಿರಲಿ ಸಂಶೋಧನೆ ಅಗತ್ಯ ದೇಶದ ಯಶಸ್ಸನ್ನು ನಿನ್ನ ಯಶಸ್ಸು ಅಂದ್ಕೊ ಮೊಸರಲ್ಲಿ ಕಲ್ಲು ಹುಡ್ಕ್ಬೇಡ” ಎಂದಿದ್ದಾರೆ.













