Home Breaking Entertainment News Kannada 28 ಕೆಜಿ ಇಳಿಸಿದ್ರ ಬ್ರಹ್ಮಗಂಟು ಧಾರವಾಹಿಯ ಗೀತಾ? | ಹೀಗೂ ಟ್ರಾನ್ಸ್ಫಾರ್ಮೇಷನ್ ಆಗ್ತಾರಾ?

28 ಕೆಜಿ ಇಳಿಸಿದ್ರ ಬ್ರಹ್ಮಗಂಟು ಧಾರವಾಹಿಯ ಗೀತಾ? | ಹೀಗೂ ಟ್ರಾನ್ಸ್ಫಾರ್ಮೇಷನ್ ಆಗ್ತಾರಾ?

Hindu neighbor gifts plot of land

Hindu neighbour gifts land to Muslim journalist

ಹೌದು, ಕಿರುತೆರೆಯ ಖ್ಯಾತ ನಟಿಯರಲ್ಲಿ ಗೀತಾಭಾರತಿ ಕೂಡ ಒಬ್ಬಳು. ಗುಂಡಮ್ಮ ಎಂದೆ ಫೇಮಸ್ ಅಂತಾನೆ ಹೇಳಬಹುದು. ಜೀ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದಂತಹ ಬ್ರಹ್ಮಗಂಟು ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದಾದ ನಂತರ ಬಿಗ್ ಬಾಸ್ 8 ರಲ್ಲಿ ಕಾಣಿಸಿದ್ದರು. ಇವರು ಇವಾಗ ಸದ್ಯಕ್ಕೆ ಫುಲ್ ಸದ್ದು ಮಾಡ್ತಾ ಇದ್ದಾರೆ. ಅದೇನಪ್ಪಾ ಅಂತ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.

ದಿನದಿಂದ ದಿನಕ್ಕೆ ವರ್ಕೌಟ್ ಮಾಡುತ್ತಿರುವಂತಹ ಗೀತಾ ಬರೋಬರಿ 28 ಕೆಜಿ ಕಮ್ಮಿಯಾಗಿದ್ದಾರೆ. ಇವರ ವರ್ಕೌಟ್ ವೀಡಿಯೋಸ್ ಮತ್ತು ಫೋಟೋಸ್ ನೋಡಿದ್ರೆ ಗೊತ್ತಾಗುತ್ತೆ ಹೇಗೆ ಆಗಿದ್ದಾರೆ ಗೀತಾ ಭಾರತಿ ಎಂದು. ಸಾಮಾನ್ಯವಾಗಿ ದಪ್ಪ ಇರುವವರು ತುಂಬಾನೇ ತಿನ್ನುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ಮಾತನ್ನು ವಾಪಾಸ್ ತೆಗೆದುಕೊಳ್ಳಬೇಕು. ಏಕೆಂದರೆ ಇವರು ಕಮ್ಮಿ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಿದ್ದರು ಕೂಡ ದಪ್ಪ ಇದ್ದರು.

ಕಾರಣ ಏನು?
ಗೀತಾ ಭಾರತಿ ತಮ್ಮ ಸಣ್ಣ ವಯಸ್ಸಿನಲ್ಲಿ ಚಿಕ್ಕದಾಗಿಯೇ, ಕ್ಯೂಟ್ ಆಗಿಯೇ ಇದ್ದರು. ತದನಂತರ ಬಾಸ್ಕೆಟ್ ಬಾಲ್ ಆಡುವ ಸಮಯದಲ್ಲಿ ಬಿದ್ದು, ಅವರಿಗೆ ಅಂಟಿಕೊಂಡಿದ್ದು ಒಬಾಸಿಟಿ. ಇದರ ಪರಿಣಾಮವಾಗಿ ಒಮ್ಮೆಲೆ ಗೀತಾ ಅವರು ದಪ್ಪವಾದರು. ಈ ಹಿಂದೆ ಇವರು ಬ್ಯಾಂಕಿಂಗ್ ನಲ್ಲೂ ಕೂಡ ಕೆಲಸ ಮಾಡಿದ್ದರು. ಇದಾದ ನಂತರ ಕಿರುತೆರೆಗೆ ಪರಿಚಯವಾದರು. ಇಲ್ಲಿ ತಮ್ಮ ಫಿಸಿಕಲ್ ಅಪೀರಿಯನ್ಸ್ ಇಂದಲೇ ಗುರುತಿಸಿಕೊಂಡರು. ಆಗ ಮಾಡಿದಂತಹ ಧಾರವಾಹಿ ಬ್ರಹ್ಮಗಂಟು. ಪ್ರಖ್ಯಾತ ಹೊಂದಿದ ಈ ದಾರವಾಹಿಯಿಂದ ಬಿಗ್ ಬಾಸ್ 8ಕ್ಕೂ ಕೂಡ ತೆರಳಿದ್ರು.

ಇದೆಲ್ಲ ಕಳೆದ ನಂತರ ಒಮ್ಮೆಲೆ ಹಠಕ್ಕೆ ಬಿದ್ದರು ಗೀತಾ. ಅದೇ ವರ್ಕ್ ಔಟ್. ಅಭಿಮಾನಿಗಳು ಮೂಗಿನ ಮೇಲೆ ಬೆರಳನಿಟ್ಟು ನೋಡುವಂತೆ ಮಾಡಿತು ಗೀತಾ 28 ಕೆಜಿ ಇಳಿಸಿದ್ದ ಟ್ರಾನ್ಸ್ಫಾರ್ಮೇಷನ್ ಫೋಟೋಸ್. ಈ ಹಿಂದೆ ಮಾಸ್ಟರ್ ಆನಂದ ಕೂಡ ಗೀತಾ ಭಾರತಿಯವರ ವರ್ಕೌಟ್ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಛಲದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಗೀತಾಭಾರತಿ ಉದಾಹರಣೆ.

ಗೀತಾ ಅವರು ‘ಲವ್ ಮಾಕ್ಟೇಲ್’ ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಮೊದಲ ಬಾರಿಗೆ ನಾಯಕಿಯಾಗುವುದಕ್ಕೆ ಹೊರಟಿದ್ದಾರೆ. ಅಷ್ಟೇ ಅಲ್ಲ, ಪಾತ್ರಕ್ಕಾಗಿ ಸಾಕಷ್ಟು ತೂಕವನ್ನೂ ಕಳೆದುಕೊಂಡಿದ್ದಾರೆ.

ಈ ಹಿಂದೆ ‘ಹೋಮ್ ಸ್ಟೇ’ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಕೊಡಂಕೇರಿ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಾಯಕಿ. ಇನ್ನೂ ಹೆಸರಿಡದ ಚಿತ್ರಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮುಹೂರ್ತವಾಗಿದೆ. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.ದಕ್ಷಿಣ ಕನ್ನಡದ ಪುಟ್ಟ ಊರೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ನಿರ್ದೇಶಕರ ಪತ್ನಿ ಪಾವನಾ ಈ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ. ಹಳ್ಳಿಹುಡುಗಿಯೊಬ್ಬಳಿಗೆ ಎನ್​ಆರ್​ಐ ಹುಡುಗನ ಜತೆಗೆ ಮದುವೆ ಗೊತ್ತಾಗುತ್ತದೆ. ಆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ತಮಾಷೆಯಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಾಗುತ್ತಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ನಿರ್ವಣವಾಗುತ್ತಿದ್ದು, ಗೀತಾ ಭಾರತಿ ಭಟ್ ಜತೆಗೆ ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ ಮುಂತಾದವರು ನಟಿಸುತ್ತಿದ್ದಾರೆ. ಮುರಳೀಧರ್ ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತವಿರುವ ಈ ಚಿತ್ರವು ದಕ್ಷಿಣ ಕನ್ನಡದ ಸೊಗಡು ಮತ್ತು ಸಂಸ್ಕೃತಿ ಹೊಂದಿದ್ದು, ಸುಳ್ಯ, ಸಂಪಾಜೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.