Home Breaking Entertainment News Kannada Darshan: ದರ್ಶನ್‌ ಮನೆ ಮುಂದೆ ʼವಿಶೇಷ ಪ್ರಕಟಣೆʼ ಬೋರ್ಡ್‌!!! ಮನವಿಯಲ್ಲಿ ಏನಿತ್ತು?

Darshan: ದರ್ಶನ್‌ ಮನೆ ಮುಂದೆ ʼವಿಶೇಷ ಪ್ರಕಟಣೆʼ ಬೋರ್ಡ್‌!!! ಮನವಿಯಲ್ಲಿ ಏನಿತ್ತು?

Darshan

Hindu neighbor gifts plot of land

Hindu neighbour gifts land to Muslim journalist

Darshan Birthday: ನಟ ದರ್ಶನ್‌ ಕಾಟೇರ ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದು, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಇಲ್ಲಿಯವರೆಗೆ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿನಲ್ಲಿ ಕಾಟೇರ ಮೊದಲ ಸ್ಥಾನದಲ್ಲಿದೆ. ಸದ್ಯ, ಅಭಿಮಾನಿಗಳು ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಟ ದರ್ಶನ್ ಬರ್ತ್‌ಡೇ ಇರುವ ಹಿನ್ನೆಲೆ ಈ ವಿಶೇಷ ದಿನಕ್ಕಾಗಿ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂಭಾಗದಲ್ಲಿ ವಿಶೇಷ ಮನವಿಯೊಂದರ ಪ್ರಕಟಣೆಯನ್ನು ಹಾಕಲಾಗಿದೆ. “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಕೂಡ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು” ಎಂದು ದರ್ಶನ್‌ ಬ್ಯಾನರ್‌ನಲ್ಲಿ ನಮೂಸಿದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Ayodhya: ಜ.22 ರಂದು ಬ್ಯಾಂಕ್‌ಗಳಿಗೆ ರಜೆ ಇದೆಯೇ? ಹಣಕಾಸು ಸಚಿವಾಲಯದ ಪ್ರಕಟಣೆ ಏನು ಹೇಳಿದೆ?

“ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ- ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದಿರಲಿ, ಪಟಾಕಿ ಹೊಡೆಯುವ ಇಲ್ಲವೇ ಕಾಂಪೌಂಡ್ ಹತ್ತುವ, ಹೂವು ಕುಂಡಗಳನ್ನು ಬೀಳಿಸುವ ಇಲ್ಲವೇ ಇತರರ ಸ್ವತ್ತುಗಳಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನವಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ” ಎಂದು ದರ್ಶನ್‌ ಮನವಿ ಸಲ್ಲಿಸಿದ್ದಾರೆ.