Home Breaking Entertainment News Kannada ಕಾಂತರಾ ಸಿನಿಮಾದಲ್ಲಿ ನಟಿಸಿದ ಸಪ್ತಮಿ ಗೌಡ ಯಾರು, ಆಕೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಕಾಂತರಾ ಸಿನಿಮಾದಲ್ಲಿ ನಟಿಸಿದ ಸಪ್ತಮಿ ಗೌಡ ಯಾರು, ಆಕೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಸದ್ಯಕ್ಕೆ ಸಖತ್ ಫೇಮಸ್ ಅಲ್ಲಿ ಇರೋದು ಅಂದ್ರೆ ಅದು ಕಾಂತಾರ ಸಿನಿಮಾ. ಎಲ್ಲಿ ಹೋದರೂ ಕೂಡ ಕಾಂತರದ ಹವಾ ಸಖತ್ತಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಜನರು ಕಿಕ್ಕಿರಿದು ಈ ಸಿನಿಮಾವನ್ನು ನೋಡಲು ಮುಗಿಬೀಳ್ತಾ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ. ದಿನದಿಂದ ದಿನಕ್ಕೆ ಇದರ ಬಾಕ್ಸ್ ಆಫೀಸ್ ಕಲೆಕ್ಷನ್ ಹೈ ಆಗ್ತಾನೆ ಇದೆ.

ಈ ಸಿನಿಮಾದಲ್ಲಿ ನಟಿಸಿದ ಲೀಲಾವತಿ ಪಾತ್ರವೂ ಸಪ್ತಮಿ ಗೌಡ. ಈಗ ಸಿನಿ ಪ್ರೇಕ್ಷಕರಿಗೆ ಆಕೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದೆ.

ಈಕೆ ಮೂಲತಃ ಬೆಂಗಳೂರಿನ ಯುವತಿ. 1996 ರಲ್ಲಿ ಜನಿಸಿದ ಈಕೆಗೆ ಈಗ 26 ವರ್ಷ. ಈಗಾಗಲೇ ಒಂದಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೂ ಕೂಡ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ ಅಂತ ಹೇಳಿದರೆ ತಪ್ಪಾಗಲಾರದು. ದುನಿಯಾ ಸೂರಿಯ ಪಾಪ್ ‘ ಕಾರ್ನ್ ಮಂಕಿ ಟೈಗರ್ ‘ ಸಿನಿಮಾದಲ್ಲಿ ಈ ಹಿಂದೆ ನಟಿಸಿದ್ದರು.

ಈಕೆ ಮೂಲತಃ ಪ್ರತಿಭಾವಂತ ಹುಡುಗಿ. ಆಕೆ ಸಿವಿಲ್ ಇಂಜಿನಿಯರಿಂಗ್ ಓದು ಓದಿದ್ದಾಳೆ. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಆಕೆ ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಕೂಡ. ಆಕೆ ತಂದೆ ಕೆ ಎಸ್ ಉಮೇಶ್ ಅಸಿಸ್ಟೆಂಟ್ ಪೋಲಿಸ್ ಕಮಿಷನರ್ ಆಗಿದ್ದವರು. ಇಂತಹ ಒಳ್ಳೆಯ ಹಿನ್ನೆಲೆಯಿಂದ ಬಂದ ಸಪ್ತಮಿ ಗೌಡ ಇದೀಗ ಕಾಂತಾರದಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ.

ಕಾಂತಾರ ಗಿಂತ ಮೊದಲು ಆಕೆ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಇದಾದ ನಂತರ ಕಾಂತಾರ ಸಿನಿಮಾಕ್ಕಾಗಿ ರಿಷಬ್ ಸಪ್ತಮಿ ಗೌಡಳನ್ನು ಆಯ್ಕೆ ಮಾಡಿದರು.

ಆಯ್ಕೆಯಲ್ಲಿ ಸೆಲೆಕ್ಟ್ ಆದ ನಂತರ ಹಲವಾರು ದಿನಗಳ ಕಾಲ ಟ್ರೈನಿಂಗ್ ಕೂಡ ನೀಡಿದರು. ಪ್ರಥಮ ಬಾರಿಗೆ ಸಪ್ತಮಿ ಗೌಡರನ್ನು ಕಾಂತಾರ ತಂಡದಲ್ಲಿ ಯಾರು ಕೂಡ ಒಪ್ಪಿಕೊಂಡಿರಲಿಲ್ಲ.

ಕೇವಲ ರಿಷಬ್ ಶೆಟ್ಟಿ ಮಾತ್ರ ನನ್ನನ್ನು ಪಾತ್ರಕ್ಕೆ ತಕ್ಕುದಾದ ಹುಡುಗಿ ಈಕೆ ಎಂಬ ನಂಬಿಕೆ ಇತ್ತು. ಇದಾದ ನಂತರ ಹಲವು ಟ್ರೈನಿಂಗ್ ಮತ್ತು ಕ್ಯಾಮೆರಾ ವೆಲ್ಲ ಓಕೆ ಆದ ನಂತರ ಇಡೀ ತಂಡವೇ ಸಪ್ತಮಿಯನ್ನು ಒಪ್ಪಿಕೊಂಡರು.

ಇದೀಗ ಎಲ್ಲೆಡೆ ಆಗ್ತಿರುವಂತಹ ಕಾಂತರದ ಹೀರೋಯಿನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? 50 ಲಕ್ಷ ರೂಪಾಯಿಗಳು ಲೀಲಾ ಪಾತ್ರ ಮಾಡಿದ ಸಪ್ತಮಿ ಗೌಡರಿಗೆ ದೊರೆತಿದೆ. ಹಲವಾರು ಸಂದರ್ಶನಗಳನ್ನು ಈಗಾಗಲೇ ನೀಡಿದ್ದಾರೆ ಕೂಡ. ಮುಂದಿನ ದಿನಗಳಲ್ಲಿ ಸಪ್ತಮಿ ಗೌಡರಿಗೆ ಇನ್ನಷ್ಟು ಹೆಚ್ಚು ಸಿನಿಮಾಗಳ ಆಫರ್ ಗಳು ಬರಬಹುದು. ಅವರು ಇದ್ದಂತಹ ಮೂರು ಪಟ್ಟು ಬಣ್ಣವನ್ನು ಈ ಸಿನಿಮಾದಲ್ಲಿ ಕಮ್ಮಿ ಮಾಡಿದ್ದಾರೆ.