Home Breaking Entertainment News Kannada Actor Suniel Shetty : ಬಾಲಿವುಡ್‌ ನಟ ಸುನೀಲ್‌ ಶೆಟ್ಟಿಗೆ ನಟ ಗೋವಿಂದನ ಮೇಲೆ ತೀವ್ರವಾದ...

Actor Suniel Shetty : ಬಾಲಿವುಡ್‌ ನಟ ಸುನೀಲ್‌ ಶೆಟ್ಟಿಗೆ ನಟ ಗೋವಿಂದನ ಮೇಲೆ ತೀವ್ರವಾದ ಸಿಟ್ಟು! ಈ ಕೋಪಕ್ಕೆ ನಿಜವಾದ ಕಾರಣ ಏನು ಗೊತ್ತಾ?

Actor Suniel Shetty

Hindu neighbor gifts plot of land

Hindu neighbour gifts land to Muslim journalist

Actor Suniel Shetty : ಬಾಲಿವುಡ್‌ ನಟ ಗೋವಿಂದ (Actor Suniel Shetty) ಅವರು ಹಾಸ್ಯಮಯ ಪಾತ್ರದಿಂದ ಹಿಡಿದು, ಗಂಭೀರ ಪಾತ್ರದವರೆಗೆ ಎಲ್ಲ ರೀತಿಯ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ನಟ ಗೋವಿಂದ ಅವರ ಬಗ್ಗೆ ಇನ್ನೋರ್ವ ನಟರಾದ ಸುನೀಲ್‌ ಶೆಟ್ಟಿ (Actor Suniel Shetty) ಅಸಮಾಧಾನ ಹೊರಹಾಕಿದ ವಿಚಾರ ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಸುನೀಲ್‌ ಶೆಟ್ಟಿ ಅವರು ಗೋವಿಂದ ಅವರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಗೋವಿಂದ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.

“ಗೋವಿಂದ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ ಎನ್ನುವ ವಿಚಾರ ನನಗೆ ಬೇಸರ ತಂದಿದೆ. ಅವರು ನಿಜಕ್ಕೂ ಒಬ್ಬ ಅತ್ಯುತ್ತಮ ನಟ. ಅವರು ಮತ್ತೆ ಸಿನಿಮಾ ಕಡೆಗೆ ಮುಖ ಮಾಡಬೇಕಿದೆ . ಈಗ ಸದ್ಯಕ್ಕೆ ಅವರು ಪ್ರತಿನಿತ್ಯ ಕೆಲಸ ಮಾಡುತ್ತಿಲ್ಲ. ಆದರೆ ಇನ್ನು ಮುಂದೆ ಅವರು ದಿನವೂ ಸಿನಿಮಾ ಕೆಲಸ ಮಾಡಬೇಕಿದೆ. ಸಿನಿಮಾ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಅವರು ಹುಟ್ಟಿರುವುದೇ ಸಿನಿಮಾ ಮಾಡುವುದಕ್ಕೆ” ಎಂದು ನಟ ಸುನೀಲ್‌ ಶೆಟ್ಟಿ ಹೇಳಿದ್ದಾರೆ.

ಈ ಮೊದಲು ಅಂದರೆ 2008ರಲ್ಲಿ ಸುನಿಲ್‌ ಶೆಟ್ಟಿ ಮತ್ತು ಗೋವಿಂದ ಅವರು ಲೂಟ್‌ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ವೇಳೆ ಗೋವಿಂದ ಅವರು ಹೆಚ್ಚು ತೂಕವನ್ನೂ ಇಳಿಸಿಕೊಂಡಿದ್ದರು. ಅದಕ್ಕೆ ಕಾರಣ ಸುನಿಲ್‌ ಎಂದೂ ಹೇಳಿದ್ದರು. “ಬ್ಯಾಂಕಾಕ್‌ನಲ್ಲಿ ಚಿತ್ರೀಕರಣವಾಗುವಾಗ ಸುನಿಲ್‌ ನನಗೆ ಕೊಬ್ಬು ರಹಿತ, ಎಣ್ಣೆ ರಹಿತ ಖಾದ್ಯಗಳನ್ನು ಮಾತ್ರವೇ ತಿನ್ನಿಸಿ ತೂಕ ಕಡಿಮೆ ಮಾಡಿಸಿದ” ಎಂದೂ ಅವರು ಹೇಳಿಕೊಂಡಿದ್ದರು.

ಅದಲ್ಲದೆ ಗೋವಿಂದ ಅವರು ಕೊನೆಯದಾಗಿ 2019ರಲ್ಲಿ ಬಿಡುಗಡೆಯಾದ ರಂಗೀಲಾ ರಾಜಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಎಂದಿದ್ದಾರೆ.

ಅದಲ್ಲದೆ ಈ ಹಿಂದೆ ನಟ ರೋಹಿತ್‌ ಶೆಟ್ಟಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. “ಗೋವಿಂದ ಅವರು ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸದೇ ಇದ್ದಿದ್ದರೆ ಅವರು ಅತ್ಯಂತ ದೊಡ್ಡ ಸ್ಟಾರ್‌ ಆಗಿರುತ್ತಿದ್ದರು. ಅವರು ಮತ್ತು ಡೇವಿಡ್‌ ಧವನ್‌ ಸೇರಿಕೊಂಡು ಹತ್ತು ವರ್ಷಗಳ ಕಾಲ ಹಿಟ್‌ ಮೇಲೆ ಹಿಟ್‌ ಸಿನಿಮಾ ಕೊಟ್ಟಿದ್ದಾರೆ. ಶೋಲಾ ಔರ್‌ ಶಬ್ನಮ್‌, ಆಂಕೇ, ರಾಜಾ ಬಾಬು, ಜೋಡಿ ನಂ. 1, ಕೂಲಿ ನಂ. 1, ಹಸೀನಾ ಮಾನ್‌ ಜಾಯೇಗಿ ಅಂತಹ ಅತ್ಯದ್ಭುತ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಗೋವಿಂದ ಸುಮ್ಮನಾಗಿಬಿಟ್ಟಿದ್ದಾರೆ” ಎಂದು ರೋಹಿತ್‌ ಹೇಳಿದ್ದರು.

ಒಟ್ಟಿನಲ್ಲಿ ಗೋವಿಂದ ಅವರು ಮತ್ತೇ ಸಿನಿಮಾ ಕಡೆ ಮುಖ ಮಾಡಬೇಕಿದೆ. ಅವರ ಸಿನಿಮಾಕ್ಕಾಗಿ ಹಲವಾರು ಅಭಿಮಾನಿಗಳು ಹಾತೋರೆಯುತ್ತಿದ್ದಾರೆ.