Home Breaking Entertainment News Kannada Ashwini started the workout: ಅಪ್ಪು ಸ್ಟೈಲಿನಲ್ಲಿ ಭರ್ಜರಿ ವರ್ಕೌಟ್ ಶುರುಮಾಡಿದ ಅಶ್ವಿನಿ ಪುನೀತ್! ದೊಡ್ಮನೆ...

Ashwini started the workout: ಅಪ್ಪು ಸ್ಟೈಲಿನಲ್ಲಿ ಭರ್ಜರಿ ವರ್ಕೌಟ್ ಶುರುಮಾಡಿದ ಅಶ್ವಿನಿ ಪುನೀತ್! ದೊಡ್ಮನೆ ಸೊಸೆಯ ವರ್ಕೌಟ್ ವೀಡಿಯೋ ಇದೀಗ ಎಲ್ಲೆಡೆ ವೈರಲ್!!

Hindu neighbor gifts plot of land

Hindu neighbour gifts land to Muslim journalist

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡುತ್ತಿದ್ದ ವರ್ಕೌಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ವರ್ಕೌಟಿಗೆ ಫಿದಾ ಆಗದವರೇ ಇಲ್ಲ. ಅವರು ಒಂದು ವರ್ಕೌಟ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದರೆ ಅದು ಜನಮನ ಗೆದ್ದು ಲಕ್ಷಾಂತರ ವೀವ್ಸ್ ಪಡೆದುಕೊಳ್ಳುತ್ತಿತ್ತು. ಆದರೆ ಪುನೀತ್ ಅವರ ಅಗಲಿಕೆಯ ನಂತರ ಅವರ ವರ್ಕೌಟ್ ಮಾಡ್ತಿದ್ದ ಜಿಮ್ ಅನಾಥವಾಗಿತ್ತು. ಆದರೀಗ ಮತ್ತೆ ಆ ಜಿಮ್ ಗೆ ಒಂದು ಹೊಸ ಕಳೆ ಬಂದಂತಿದೆ. ಮತ್ತದು ಮೊದಲಿನಂತೇ ಕಳೆಗಟ್ಟಿದೆ. ಇದಕ್ಕೆ ಕಾರಣವೇನು ಗೊತ್ತಾ? ಹಾಗಿದ್ರೆ ಈ ಸ್ಟೋರಿ ನೋಡಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಇದೀಗ ಪುನೀತ್ ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಅಂದ್ರೆ ಅಪ್ಪು ಸ್ಟೈಲಿನಲ್ಲಿಯೇ ಜಿಮ್ ವರ್ಕೌಟ್ (Workout) ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಸದ್ಯ ಅವರೀಗ ಪುನೀತ್ ಅವರ ಜಿಮ್ ನಲ್ಲಿಯೇ ವರ್ಕೌಟ್ ಮಾಡುವುದನ್ನು ಶುರುಹಚ್ಚಿಕೊಂಡಿದ್ದು, ಆ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಹೌದು, ಅಶ್ವಿನಿ ಅವರು ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ. ಪವರ್‌ಸ್ಟಾರ್ ಹಾಗೆ ಅಶ್ವಿನಿ ಕೂಡ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಪುನೀತ್ ಅವರಿಗೆ ಜಿಮ್, ವರ್ಕೌಟ್ ಎಂದರೆ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಅವರು ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಅವರ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಜನರು, ಅವರಂತೇ ಮಾಡಲು ಪ್ರಯತ್ನಿಸುತ್ತಿದ್ದರು. ಆದರೀಗ ಅಪ್ಪು ನೆನಪು ಮಾತ್ರ. ಆದರೆ ಅವರ ಪತ್ನಿ ಅಶ್ವಿನಿ ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಶ್ವಿನಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಪ್ಪು ಅಗಲಿಕೆ ನಂತರ ಮನೆಯ ಜವಾಬ್ದಾರಿಯನ್ನ ಅಶ್ವಿನಿ ಕೈಗೆತ್ತಿಕೊಂಡಿದ್ದಾರೆ. ಮುದ್ದು ಮಕ್ಕಳ ಪಾಲನೆಯ ಜೊತೆ ಪಿಆರ್‌ಕೆ ಸಂಸ್ಥೆಯನ್ನ ಮುನ್ನಡೆಸುತ್ತಿದ್ದಾರೆ. ಹೊಸ ಸಿನಿಮಾಗೆ ಬೆಂಬಲ ಸೂಚಿಸುವ ಮೂಲಕ ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ. ಇನ್ನೂ ತಮ್ಮ ಸಂಸ್ಥೆ ಪಿಆರ್‌ಕೆ (Prk Productions) ಕಡೆಯಿಂದ ಹೊಸ ಸಿನಿಮಾ ನಿರ್ಮಾಣದತ್ತ ಅಶ್ವಿನಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಕಥೆಗಳನ್ನ ಅಶ್ವಿನಿ ಕೇಳುತ್ತಿದ್ದಾರೆ. ಅಪ್ಪು ಕನಸಿನ ಹಾದಿಯಲ್ಲಿ ಪತ್ನಿ ಅಶ್ವಿನಿ ಸಾಗುತ್ತಿದ್ದಾರೆ.