Home Breaking Entertainment News Kannada Actress Samantha Health : ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!!! ಧ್ವನಿ ಕಳೆದುಕೊಂಡ...

Actress Samantha Health : ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!!! ಧ್ವನಿ ಕಳೆದುಕೊಂಡ ನಟಿ

Actress Samantha Health

Hindu neighbor gifts plot of land

Hindu neighbour gifts land to Muslim journalist

Actress Samantha Health: ನಟಿ ಸಮಂತಾ(Samantha) ಮಯೋಸೈಟಿಸ್ ಸಮಸ್ಯೆ ಎದುರಿಸಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ!!! ನಟಿ ಸಮಂತಾ ಅವರ ನಟನೆಯ ‘ಶಾಕುಂತಲಂ’ ಸಿನಿಮಾ ರಿಲೀಸ್ ಆಗಲು ಇನ್ನೇನು ಎರಡೇ ದಿನ ಬಾಕಿಯಿದ್ದು, ಸಿನಿಮಾ ರಿಲೀಸ್ ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಸಮಂತಾ ಅವರ ಮತ್ತೊಮ್ಮೆ ಕೈಕೊಟ್ಟಿದ್ದು, ಈ ಬಗ್ಗೆ ನಟಿ ಟ್ವೀಟ್ (Tweet) ಮಾಡಿದ್ದಾರೆ
ಸಮಂತಾ ರುತ್ ಪ್ರಭು ಕಳೆದ ಕೆಲವು ವರ್ಷಗಳಿಂದ ತಮ್ಮ ವೈವಾಹಿಕ ಜೀವನದಿಂದ ಮತ್ತು ತಮ್ಮ ಸಿನೆಮಾ ಜೀವನದಿಂದ ಭಾರಿ ಸುದ್ದಿಯಲ್ಲಿರುವ ತೆಲುಗಿನ ನಟಿ (Telugu Actress) ನಟಿ ಸಮಂತಾ ಕಳೆದ ವರ್ಷ ತಮ್ಮ ಪತಿ ನಾಗ ಚೈತನ್ಯ ಅವರೊಂದಿಗೆ ವೈವಾಹಿಕ ಜೀವನದಲ್ಲಾದ ಕೆಲವು ಅಹಿತಕರವಾದ ಘಟನೆಗಳಿಂದ ಬೇಸತ್ತು ಹೋಗಿದ್ದರು. ಇದರ ನಡುವೆಯೇ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ (Pushpa Film) ಚಿತ್ರ ಬಿಡುಗಡೆಗೆ ರೆಡಿ ಆಗಿ ಅದರಲ್ಲಿ ನಟಿ ಸಮಂತಾ ಅವರು ‘ಹೂಂ ಅಂಟಾವಾ ಮಾವ, ಹೂಂ ಹೂಂ ಅಂಟಾವಾ’ ಅನ್ನೋ ಹಾಡಿಗೆ ಮಾದಕವಾಗಿ ಸ್ಟೆಪ್ಸ್ (Steps) ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಗೊತ್ತೇ ಇದೆ.‘ ಇದರ ನಂತರ ಯಶೋದ’ (Yashoda) ಯಶಸ್ಸಿನ ಬಳಿಕ ಶಾಕುಂತಲೆಯಾಗಿ ತೆರೆಯ ಮೇಲೆ ಅಭಿಮಾನಿಗಳನ್ನು ರಂಜಿಸುವ ನಡುವೆಯೇ ಸಮಂತಾ ಆರೋಗ್ಯ ಕೆಟ್ಟಿದೆ ಎಂಬ ವಿಚಾರ ಹೊರ ಬಿದ್ದಿದೆ.

ನಾನು ನನ್ನ ಸಿನಿಮಾವನ್ನು ಪ್ರಮೋಷನ್ ಮಾಡಿ ನಿಮ್ಮ ಪ್ರೀತಿಯಲ್ಲಿ ಮಿಂದೇಳಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ವಿಪರೀತವಾದ ಶೆಡ್ಯೂಲ್ ಮತ್ತು ಕೆಲಸಗಳಿಂದ ಬ್ರೇಕ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಾನು ಜ್ವರದಿಂದ (Actress Samantha Health) ವಿಶ್ರಾಂತಿ ಪಡೆಯುತ್ತಿದ್ದೇನೆ. ಇದರ ಜೊತೆಗೆ ಧ್ವನಿ ಕೂಡ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಸ್ಯಾಮ್ , ನಿಮ್ಮೆಲ್ಲರನ್ನೂ ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಡ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳಲ್ಲಿ (Fans)ಆತಂಕ ಕಳವಳ ಹೆಚ್ಚಾಗಿದೆ. ಅನಾರೋಗ್ಯ ಕಾರಣದಿಂದ ಹೈದರಾಬಾದ್ ಕಾಲೇಜ್‌ನಲ್ಲಿ ನಿಗದಿಯಾಗಿರುವ ಪ್ರಮೋಷನ್ ಇವೆಂಟ್‌ನಲ್ಲಿ (Promotion Event) ಭಾಗಿಯಾಗದಿರುವ ಬಗ್ಗೆ ಮಾಹಿತಿ ನೀಡಿದ್ದು, ಹೀಗಾಗಿ, ಅಭಿಮಾನಿಗಳು ಸಮಂತಾ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

 

ಇದನ್ನು ಓದಿ : Pregnant women : ಬಿಸಿಲಿನಲ್ಲಿ ಗರ್ಭಿಣಿಯರ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕೆ? ಆಹಾರದಲ್ಲಿ ಈ ಬದಲಾವಣೆ ಮಾಡಿ