Home Breaking Entertainment News Kannada Shoaib Malik-Sania Mirza: ಶೋಯೆಬ್ ಮೂರನೇ ಮದುವೆ : ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ನೀಡಿದ್ರು...

Shoaib Malik-Sania Mirza: ಶೋಯೆಬ್ ಮೂರನೇ ಮದುವೆ : ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ನೀಡಿದ್ರು ಶಾಕಿಂಗ್ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

Shoaib Malik-Sania Mirza: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik-Sania Mirza)ಅವರ 14 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಇದೀಗ ಶೋಯೆಬ್ ಮಲಿಕ್, ಪಾಕಿಸ್ತಾನದ ನಟಿ ಸನಾ ಜಾವೆದ್ ಅವರನ್ನು ಮೂರನೇ ಮದುವೆಯಾಗಿದ್ದಾರೆ.

 

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ತನ್ನ ಮೂರನೇ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬೆನ್ನಲ್ಲೇ ಸಾನಿಯಾ – ಶೋಯೆಬ್ ವಿಚ್ಛೇದನದ (Divorce)ವಿಷಯ ಭಾರೀ ಚರ್ಚೆಗೆ ಕಾರಣವಾಗಿತ್ತು. ಭಾರತದ ಶ್ರೇಷ್ಠ ಮಹಿಳಾ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ಕುರಿತು ಈ ಮೊದಲು ಅನೇಕ ಗುಮಾನಿ ಎದ್ದಿತ್ತು. ಇದೀಗ, ಸಾನಿಯಾ ಮಿರ್ಜಾ ಕುಟುಂಬ ವಿಚ್ಛೇಧನ ನಿಜ ಎಂಬುದನ್ನು ಖಾತ್ರಿಪಡಿಸಿದೆ.

 

ಶೋಯೆಬ್ ಮರು ಮದುವೆಯಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸಾನಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಸಾನಿಯಾ ಮಿರ್ಜಾ ಅವರ ಕಡೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಶೋಯೆಬ್ ಮಲಿಕ್ ಅವರೊಂದಿಗೆ ಭಾರತೀಯ ಟೆನ್ನಿಸ್ ಐಕಾನ್ ಸಾನಿಯಾ ಮಿರ್ಜಾ ಬೇರ್ಪಟ್ಟಿದ್ದಾರೆ ಎಂದು ಮಿರ್ಜಾ ಕುಟುಂಬ ಭಾನುವಾರ ಖಾತ್ರಿ ಪಡಿಸಿದೆ.

 

ಮಿರ್ಜಾ ಅವರ ಕುಟುಂಬ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಸಾನಿಯಾ ಮಿರ್ಜಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಬದುಕಿನಿಂದ ದೂರವಿಟ್ಟಿದ್ದಾಳೆ. ಆದರೆ, ಶೋಯೆಬ್ ಮಲಿಕ್ ಮತ್ತು ತಾನು ಕೆಲವು ತಿಂಗಳುಗಳಿಂದ ವಿಚ್ಛೇದನ ಪಡೆಯುತ್ತಿರುವುದನ್ನು ಹಂಚಿಕೊಳ್ಳುವ ಅವಶ್ಯಕತೆ ಇಂದು ಎದುರಾಗಿದೆ. ಶೋಯೆಬ್ ಮಲಿಕ್ ಅವರ ಹೊಸ ಪ್ರಯಾಣಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ!”.

 

“ಸಾನಿಯಾ ಮಿರ್ಜಾ ಅವರ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ನಾವು ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಅವರ ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ವಿನಂತಿಸಲು ಬಯಸುತ್ತೇವೆ,” ಎಂದು ಸಾನಿಯಾ ಮಿರ್ಜಾ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.