Home Business ಬಿಇ/ಬಿ.ಟೆಕ್ ಪದವೀಧರರಿಗೆ ಉದ್ಯೋಗಾವಕಾಶ ತಿಂಗಳಿಗೆ 1.60 ಲಕ್ಷ ಸಂಬಳ ಪಡೆಯುವ ಅವಕಾಶ

ಬಿಇ/ಬಿ.ಟೆಕ್ ಪದವೀಧರರಿಗೆ ಉದ್ಯೋಗಾವಕಾಶ ತಿಂಗಳಿಗೆ 1.60 ಲಕ್ಷ ಸಂಬಳ ಪಡೆಯುವ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್(National Hydro Electric Power Corporation -NHPC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 401 ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಅವಶ್ಯಕವಾಗಿದೆ.

ಹುದ್ದೆಯ ಮಾಹಿತಿ:

ಟ್ರೈನಿ ಎಂಜಿನಿಯರ್ (ಸಿವಿಲ್)- 136

ಟ್ರೈನಿ ಎಂಜಿನಿಯರ್ (ಎಲೆಕ್ಟ್ರಿಕಲ್)- 41

ಟ್ರೈನಿ ಎಂಜಿನಿಯರ್ (ಮೆಕ್ಯಾನಿಕಲ್)- 108

ಟ್ರೈನಿ ಆಫೀಸರ್ (ಫೈನಾನ್ಸ್​)- 99

ಟ್ರೈನಿ ಆಫೀಸರ್ (ಹೆಚ್​ಆರ್​)- 14

ಟ್ರೈನಿ ಆಫೀಸರ್ (ಲಾ)- 3

ಹುದ್ದೆ ಖಾಲಿ ಇರುವ ಸಂಸ್ಥೆ – ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್

ಹುದ್ದೆ – ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್

ಒಟ್ಟು – ಹುದ್ದೆ 401

ವೇತನ – 50,000-1,60,000

ಉದ್ಯೋಗದ ಸ್ಥಳ – ಭಾರತ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/01/2023ಅರ್ಜಿ ಸಲ್ಲಿಸಲು ಕೊನೆಯ ದಿನ: 25/01/2023

ವಯೋಮಿತಿ: ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 25, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

ಒಬಿಸಿ(NCL) ಅಭ್ಯರ್ಥಿಗಳು-3 ವರ್ಷ

SC/ST ಅಭ್ಯರ್ಥಿಗಳು- 5 ವರ್ಷ

PWD (ಜನರಲ್) ಅಭ್ಯರ್ಥಿಗಳು- 10 ವರ್ಷ

PWD (ಒಬಿಸಿ/ NCL) ಅಭ್ಯರ್ಥಿಗಳು- 13 ವರ್ಷ

PWD (SC/ST) ಅಭ್ಯರ್ಥಿಗಳು- 15 ವರ್ಷ

ವಿದ್ಯಾರ್ಹತೆ:

ಟ್ರೈನಿ ಎಂಜಿನಿಯರ್ (ಸಿವಿಲ್) ಹುದ್ದೆಗೆ ಬಿಎಸ್ಸಿ, ಸಿವಿಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್ ಆಗಿರಬೇಕು.

ಟ್ರೈನಿ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗೆ ಬಿಎಸ್ಸಿ, ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಪವರ್ ಸಿಸ್ಟಮ್ಸ್ ಮತ್ತು ಹೈವೋಲ್ಟೇಜ್/ಪವರ್ ಆಗಿರಬೇಕು.

ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ಟ್ರೈನಿ ಎಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗೆ ಬಿಎಸ್ಸಿ, ಮೆಕ್ಯಾನಿಕಲ್/ಪ್ರೊಡಕ್ಷನ್/ಥರ್ಮಲ್/ಮೆಕ್ಯಾನಿಕಲ್ ಮತ್ತು ಆಟೋಮೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಆಗಿರಬೇಕು.

ಟ್ರೈನಿ ಆಫೀಸರ್ (ಫೈನಾನ್ಸ್​) ಹುದ್ದೆಗೆ CA ಅಥವಾ ICWA, CMA, ಕಾಸ್ಟ್ ಅಕೌಂಟೆಂಟ್, ಪದವಿ ಆಗಿರಬೇಕು.ಟ್ರೈನಿ ಆಫೀಸರ್ (ಹೆಚ್​ಆರ್​) ಹುದ್ದೆಗೆ ಸ್ನಾತಕೋತ್ತರ ಪದವಿ, MBA, ಸೋಷಿಯಲ್ ವರ್ಕರ್​​ನಲ್ಲಿ ಸ್ನಾತಕೋತ್ತರ, ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ, ಸ್ನಾತಕೋತ್ತರ ಪದವಿ ಆಗಿರಬೇಕು.ಟ್ರೈನಿ ಆಫೀಸರ್ (ಲಾ) ಹುದ್ದೆಗೆ ಪದವಿ, ಕಾನೂನಿನಲ್ಲಿ ಪದವಿ, LLB ಆಗಿರಬೇಕು.

ಅರ್ಜಿ ಶುಲ್ಕ:

SC/ST/PWD/ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ. ಸಾಮಾನ್ಯ/EWS/OBC ಅಭ್ಯರ್ಥಿಗಳು- 295 ರೂ.

ಪಾವತಿಸುವ ಬಗೆ- ಆನ್​ಲೈನ್

ಸ್ಥಳ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 50,000-1,60,000 ರೂ. ವರೆಗೆ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಗೇಟ್​ ಮಾರ್ಕ್ಸ್​ ಹಾಗೂ ಸಂದರ್ಶನ ಇರಲಿದೆ. ಮೇಲೆ ತಿಳಿಸಿದ ಮಾಹಿತಿ ಆಧರಿಸಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.