Home ದಕ್ಷಿಣ ಕನ್ನಡ ಶಾಂತಿಮೊಗರು : ಬೈಕ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದು ಪರಾರಿ,ಬೈಕ್ ಸವಾರಗೆ ಗಾಯ

ಶಾಂತಿಮೊಗರು : ಬೈಕ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದು ಪರಾರಿ,ಬೈಕ್ ಸವಾರಗೆ ಗಾಯ

Hindu neighbor gifts plot of land

Hindu neighbour gifts land to Muslim journalist

ಸವಣೂರು : ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಹಾಗೂ ಸವಾರ ಗಾಯಗೊಂಡ ಘಟನೆ ಶಾಂತಿ ಮೊಗರು ಸೇತುವೆ ಸಮೀಪ ನ 15 ರಂದು ರಾತ್ರಿ ನಡೆದಿದೆ.

ಕಾಣಿಯೂರು ಸಮೀಪದ ನೂಜಿ ನಿವಾಸಿ ಮಹೇಶ್ ಗಾಯಗೊಂಡ ಬೈಕ್ ಸವಾರ. ಇವರನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಕುದ್ಮಾರ್ – ಆಲಂಕಾರನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಂತಿ ಮೊಗರು ಸೇತುವೆಯಿಂದ 300 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ನೂಜಿ ಮಹೇಶ್ ರವರು ತಮ್ಮ ಬಜಾಜ್‌ ಡಿಸ್ಕವರಿ ಬೈಕ್‌ ನಲ್ಲಿ ಅಲಂಗಾರಿನಿಂದ ತನ್ನ ಮನೆಗೆ ಬರುತ್ತಿರುವಾಗ ಅಪಘಾತ ನಡೆದ ಸ್ಥಳದಲ್ಲಿ ಯಾವುದೋ ಕಾರಣಕ್ಕೆ ಬೈಕ್ ನಿಲ್ಲಿಸಿದ್ದರು .

ಅದೇ ಮಾರ್ಗದಲ್ಲಿ ಅಲಂಕಾರಿನಿಂದ ಕುದ್ಮಾರ್ ಕಡೆಗೆ ಬರುತ್ತಿದ್ದ ಕಾರು ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಕ್ಕೆ ಉರುಳಿ ಗಾಯಗೊಂಡಿದ್ದಾರೆ. ಆದರೆ ಇದನ್ನು ಗಮನಿಸಿಯೂ, ಕಾರು ಚಾಲಕ ನಿಲ್ಲಿಸಿ ಉಪಚರಿಸದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು ಆತನ ನಡವಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂಜಿ ಮಹೇಶ್ ರವರಿಗೆ 6 ವರ್ಷಗಳ ಹಿಂದೆ ಅಪಘಾತವಾಗಿತ್ತು. ಆಗ ಇವರ ಜತೆ ಪ್ರಯಾಣಿಸುತ್ತಿದ್ದ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು , ಇವರು ಪವಾಡ ಸದೃಶ್ಯವಾಗಿ ಬದುಕಿಳಿದಿದ್ದರು.