ಬಂಟ್ವಾಳ : ಸಿಡಿಲು ಬಡಿದು ಪಂಪ್ ಶೆಡ್ ಭಸ್ಮ ,4 ಲಕ್ಷ ರೂ ನಷ್ಟ

Share the Article

ಮಂಗಳೂರು : ಬಂಟ್ವಾಳ ತಾಲೂಕಿನ ಪಂಜಿಕಲ್ಲು ‌ಗ್ರಾಮದಲ್ಲಿ ಸಿಡಿಲು ಬಡಿದು ಪಂಪು ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.

ಪಂಜಿಕಲ್ಲು ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಎಂಬವರ ತೋಟದಲ್ಲಿದ್ದ ಶೆಡ್ಡ್‌ಗೆ ರಾತ್ರಿ ವೇಳೆ ಸಿಡಿಲು ಬಡಿದಿದ್ದು, ಶೆಡ್ ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

ಶೆಡ್ ನಲ್ಲಿದ್ದ ಅಡಿಕೆ, ತೆಂಗಿನಕಾಯಿ, ಮರದ ತುಂಡುಗಳು ಸುಟ್ಟು ಹೋಗಿವೆ. ಅಂದಾಜು ಸುಮಾರು 4ಲಕ್ಷ ರೂ‌. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Leave A Reply