Home Interesting ಐದು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ-ಜೋಡಿಯ ಸಂಸಾರ ಅಂತ್ಯ!? | ಧಾರಾಳ ಮನಸ್ಸಿನ...

ಐದು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ-ಜೋಡಿಯ ಸಂಸಾರ ಅಂತ್ಯ!? | ಧಾರಾಳ ಮನಸ್ಸಿನ ಗಂಡನೇ ಖುದ್ದಾಗಿ ತನ್ನ ಪತ್ನಿಯನ್ನು ಇನ್ನೊಬ್ಬನ ಜೊತೆ ಮದುವೆ ಮಾಡಿಸಿದ!!

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಸಮರಸ ಜೀವನದ ಆರಂಭವೇ ಮದುವೆ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಯೇ ಮದುವೆ. ಅದೊಂದು ಸಾಮಾಜಿಕ ಮನ್ನಣೆ ಪಡೆದು ಕೊಂಡಿರುವ ಪವಿತ್ರ ಅಡಿಪಾಯ. ಪ್ರತಿ ಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ. ಹೀಗಿರುವಾಗ ಮದುವೆಯಾದ ವ್ಯಕ್ತಿಯೊಬ್ಬ ಇಲ್ಲಿ ಏನು ಮಾಡಿದ್ದಾನೆ ಗೊತ್ತಾ??

ಐದು ತಿಂಗಳ ಹಿಂದೆ ಮದುವೆಯಾದ ವ್ಯಕ್ತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಗುರುಗ್ರಾಮನಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಪಂಕಜ್ ಶರ್ಮಾ ಮೇ ತಿಂಗಳಲ್ಲಿ ಕೋಮಲ್ ಎಂಬಾಕೆಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ನಂತರ ಆಕೆ ಬೇರೆಯವನನ್ನು ಪ್ರೀತಿಸುತ್ತಿದ್ದಳು ಎನ್ನುವ ವಿಚಾರ ಶರ್ಮಾನಿಗೆ ತಿಳಿದಿದೆ. ಮದುವೆಯಾದ ದಿನದಿಂದಲೂ ಆಕೆ ಗಂಡನ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು.

ಮದುವೆಯಾದ ಮೇಲೂ ತನ್ನ ಪ್ರೇಮಿ ಪಿಂಟು ಜೊತೆ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಇದನ್ನು ತಿಳಿದ ಆಕೆಯ ಗಂಡ ಪಂಕಜ್ ಶರ್ಮ ಈ ವಿಷಯವನ್ನು ಕೋಮಲ್‍ಳ ತಂದೆ, ತಾಯಿಗೆ ಹೇಳಿದರು. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ.

ಕೊನೆಗೆ ಪಂಕಜ್, ಕೋಮಲ್ ಹಾಗೂ ಪಿಂಟುವನ್ನು ಕರೆಸಿ ಮಾತನಾಡಿದ್ದಾನೆ. ಆಗ ಕೋಮಲ್ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಹಾಗೂ ಪಿಂಟುವಿನ ಮದುವೆ ಮಾಡಿಸುವುದಾಗಿ ಹೇಳಿದ.

ತಾನು ಕೊಟ್ಟ ಮಾತಿನಂತೆ ಮರುದಿನವೇ ಪಂಕಜ್ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ್ದಾನೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರ ಘಟನೆಗಳು ಒಮ್ಮೊಮ್ಮೆ ಸಂಭವಿಸುತ್ತದೆ. ಆದರೆ ಪತಿ ತೋರಿದ ನಿರ್ಧಾರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಒಬ್ಬರಿಗೊಬ್ಬರು ಇಷ್ಟಪಡದೆ ಜೀವನ ನಡೆಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಆತ ತನ್ನ ಪತ್ನಿಯ ಮದುವೆ ಆಕೆಯ ಗೆಳೆಯನೊಂದಿಗೆ ಮಾಡಿಸಿದ್ದರಿಂದ ಮೂವರ ಜೀವನವು ಚೆನ್ನಾಗಿರುತ್ತದೆ ಎಂಬುದು ಹಲವರ ಅಭಿಪ್ರಾಯ.