ಮಣಿಪಾಲ:ಮದ್ಯದ ನಶೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ !! ಆರೋಪಿ ಆಕೆಯ ಸಹಪಾಠಿಯ ಬಂಧನ

Share the Article

ಮಣಿಪಾಲ:ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿನಿಯೋರ್ವಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮಣಿಪಾಲದಲ್ಲಿ ಇನ್ನೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಆಕೆಯ ಸಹಪಾಠಿಯೇ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರ ಸಂತ್ರಸ್ತೆ ಉತ್ತರಪ್ರದೇಶ ಮೂಲದವಳಾಗಿದ್ದು, ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗದಲ್ಲಿದ್ದಳು. ಆಕೆಯ ಸಹಪಾಠಿ ಆರೋಪಿ ದೆಹಲಿ ಮೂಲದ ಆರ್ಯನ್ ಚಂದಾವನಿ ಎಂದು ತಿಳಿದುಬಂದಿದೆ.

ಅಕ್ಟೋಬರ್ 16 ರಂದು ನಗರದ ಇಂದ್ರಳಿಯ ಫ್ಲಾಟ್ ಒಂದರಲ್ಲಿ ಮದ್ಯದ ನಶೆಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಆರೋಪಿಯನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

Leave A Reply