ಧರ್ಮಸ್ಥಳ : ನಾಟಿ ಮಾಡಿದ ಅಡಿಕೆ ಗಿಡ ಕಿತ್ತ ಕಿಡಿಗೇಡಿಗಳು | 2 ತಿಂಗಳ ಹಿಂದೆ ನಾಟಿ ಮಾಡಿದ ಗಿಡಗಳು

Share the Article

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ವಾಸ್ತವ್ಯವಿರುವ ಮಾಧವ ಪಡೆಟ್ನಾಯ ಎಂಬವರ ಸ್ವಾಧೀನಕ್ಕೊಳಪಟ್ಟ ಜಮೀನಿನೊಳಗೆ ರಾತೋರಾತ್ರಿ ನುಗ್ಗಿದ ಕಿಡಿಗೇಡಿಗಳು, ಸುಮಾರು 75 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಬುಡ ಸಮೇತ ಕಿತ್ತು ವಿಕೃತಿ ಮೆರೆದ ಘಟನೆ ವರದಿಯಾಗಿದೆ.

ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಮಾಧವ ಪಡ್ವಟ್ನಾಯ ರವರು ತಮ್ಮ ಸ್ವಂತ ಜಮೀನಿನಲ್ಲಿ ಸಮತಟ್ಟುಗೊಳಿಸಿದ ಜಾಗದಲ್ಲಿ ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು. ಇತ್ತೀಚೆಗೆ ರಾತ್ರಿ ವೇಳೆಯಲ್ಲಿ ಈ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿದ ಯಾರೋ ಕಿಡಿಗೇಡಿಗಳು ನಾಟಿ ಮಾಡಿದ್ದಂತಹ ಸುಮಾರು 75 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಬುಡ ಸಮೇತ ಕಿತ್ತೊಯ್ದು ಅಮಾನವೀಯತೆ ಮೆರೆದಿದ್ದಾರೆ.

Leave A Reply