ಹಿಂದೂಗಳ ಮೇಲಿನ ಹೆಚ್ಚುತ್ತಿರುವ ಹಲ್ಲೆಗಳನ್ನು ತಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ – ಹಿಂದೂ ಜನಜಾಗೃತಿ ಸಮಿತಿ

Share the Article

ತುಮಕೂರು ಜಿಲ್ಲೆಯ ಭಜರಂಗದಳದ ಸಂಚಾಲಕ ಮತ್ತು ಗೋರಕ್ಷಕ ಶ್ರೀ. ಮಂಜು ಭಾರ್ಗವರವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಇದು ಮತಾಂಧ ಇಸ್ಲಾಮಿಕ್ ಜಿಹಾದಿಗಳ ಕೃತ್ಯವಾಗಿದೆ ಎಂಬ ಸಂದೇಹವು ಮೂಡುತ್ತಿದೆ. ಇತ್ತೀಚಿಗೆ ವ್ಯಾಪಕವಾಗಿ ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ಅಕ್ರಮಣಗಳು ಹೆಚ್ಚಾಗುತ್ತಿದೆ. ವಿಶೇಷವಾಗಿ ಗೋರಕ್ಷಣೆ ಕಾರ್ಯ ಮಾಡುವ ಗೋರಕ್ಷಕರನ್ನು ಹತ್ಯೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ, ಇಂದು ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ 8 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದರು. ಈ ಕೃತ್ಯದಲ್ಲಿ ಪಿ.ಎಫ್.ಐ. ಸಂಘಟನೆಯ ಕೈವಾಡ ಇದೆ ಎಂದು ಸಾಬೀತಾಗಿದ್ದರೂ ಕೂಡ ಇದುವರೆಗೂ ಯಾವುದೇ ಆರೋಪಿಯ ಬಂಧನ ಆಗದೇ ಇರುವುದು ಅತ್ಯಂತ ಚಿಂತಾಜನಕ ವಿಷಯವಾಗಿದೆ. ಆದ್ದರಿಂದ ರಾಜ್ಯ ಸರಕಾರವು ಅಪರಾಧಿಗಳ ಮೇಲೆ ಕಠೋರ ಕಾರ್ಯಚರಣೆ ಮಾಡಬೇಕು ಮತ್ತು ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು.

?ಶ್ರೀ. ಮೋಹನ ಗೌಡ

Leave A Reply

Your email address will not be published.