ಬೆಳ್ಳಾರೆ | ಮಸೀದಿಯಲ್ಲಿ ಇತ್ತಂಡಗಳ ನಡುವೆ ಹೊಡೆದಾಟ, ಮೂವರು ಆಸ್ಪತ್ರೆಗೆ ದಾಖಲು

Share the Article

ಎರಡು ತಂಡಗಳು ಮಸೀದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಘಟನೆ ಬೆಳ್ಳಾರೆ ಮಸೀದಿಯಲ್ಲಿ ನಡೆದಿದೆ.

ಬೆಳ್ಳಾರೆ ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಫಾರ್ಮ್ ಕೊಡುವ ವಿಷಯದಲ್ಲಿ ತಕರಾರು ಉಂಟಾಗಿ, ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದೆ ಎನ್ನಲಾಗಿದೆ.

ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಜರುದ್ದೀನ್, ಜಮಾಲುದ್ದೀನ್ ಕೆ.ಎಸ್., ಅಬ್ದುಲ್ ಜಮಾಲ್ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಗಾಯಾಳುಗಳ ಪೈಕಿ ಒಂದು ತಂಡದ ಅಜರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇನ್ನೊಂದು ತಂಡದ ಹೈದರಾಲಿ ಮತ್ತು ಆಸಿರ್ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ದೂರು ದಾಖಲಾಗಿದ್ದು, ಇತ್ತಂಡದವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply