ಡ್ರಗ್ಸ್ ಜಾಲ ನಂಟು | ಇಂದು ನಟಿ ಅನನ್ಯಾ ಪಾಂಡೆ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸೂಚನೆ

Share the Article

ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ನಟಿ ಅನನ್ಯಾ ಪಾಂಡೆ ಶುಕ್ರವಾರ ಮತ್ತೊಮ್ಮೆ ಎನ್ ಸಿ ಬಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಗುರುವಾರ ಅನನ್ಯಾ ಪಾಂಡೆ ಮತ್ತು ನಟ ಶಾರುಖ್ ಖಾನ್ ಮನೆ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಗುರುವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ಅನನ್ಯಾ ಪಾಂಡೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಗುರುವಾರ ಮೂರು ಗಂಟೆಗಳ ವಿಚಾರಣೆ ಬಳಿಕ ಅವರಿಗೆ ಮನೆಗೆ ತೆರಳಲು ಅನುಮತಿ ನೀಡಲಾಗಿತ್ತು.

ಶುಕ್ರವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

Leave A Reply