ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಾಕ್ಷಿಯ ಸಾವಿನ ಹಿಂದೆ ಹಲವು ಅನುಮಾನ!! ಹೃದಯಾಘಾತ ಎಂದು ಮುಚ್ಚಿ ಹೋಗಲಿದ್ದ ಪ್ರಕರಣ-ತನಿಖೆ ಗೃಹ ಸಚಿವರ ಆದೇಶ
ಇತ್ತೀಚಿಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಆರ್ಯನ್ ಖಾನ್ ನ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೊಬ್ಬರ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿದ್ದು ಹೆಚ್ಚಿನ ತನಿಖೆಗೆ ಆಗ್ರಹವಾಗಿದೆ. ಪ್ರಕರಣದ ಸಾಕ್ಷಿ ಎನ್ನಲಾದ ಪ್ರಭಾಕರ್ ಸೇಲ್ ಎಂಬವರು ಶುಕ್ರವಾರ ತನ್ನ ನಿವಾಸದಲ್ಲಿ ಹೃದಯಾಘಾತಗೊಂಡು ಮೃತಪಟ್ಟ ಬಗ್ಗೆ ವರದಿಯಾದ ಬೆನ್ನಲ್ಲೇ ಈ ಅನುಮಾನಗಳು ವ್ಯಕ್ತವಾಗಿದೆ. 36 ವರ್ಷದ ಪ್ರಭಾಕರ್ ಅವರನ್ನು ಆರ್ಯನ್ ಬಂಧನದ ಬಳಿಕ ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭ ಸುಮಾರು 10 ಕ್ಕೂ ಹೆಚ್ಚು …