Home News ಭೀಮಾ ಜ್ಯುವೆಲ್ಲರ್ಸ್ ಮಾಲಕ ,ಸಮಾಜ ಸೇವಕ ಬಿ.ಕೃಷ್ಣನ್ ನಿಧನ

ಭೀಮಾ ಜ್ಯುವೆಲ್ಲರ್ಸ್ ಮಾಲಕ ,ಸಮಾಜ ಸೇವಕ ಬಿ.ಕೃಷ್ಣನ್ ನಿಧನ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಸಹಿತ ಅನೇಕ ಕಡೆಗಳಲ್ಲಿರುವ ಭೀಮಾ ಜ್ಯುವೆಲ್ಲರ್ಸ್ ಇದರ ಮಾಲಕ ಕೊಡುಗೈ ದಾನಿ ಬಿ.ಕೃಷ್ಣನ್(76) ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಇವರು ಪತ್ನಿ, ಮೂವರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ. ಉಡುಪಿಯ ಕೃಷ್ಣ ಮಠ ಅಷ್ಟಮಠಗಳಿಗೆ ಅಪಾರ ದೇಣಿಗೆ ನೀಡುತ್ತಿದ್ದ ಇವರ ನಿಧನಕ್ಕೆ ಅದಮಾರು, ಪೇಜಾವರ ಪಲಿಮಾರು ಪುತ್ತಿಗೆ, ಕಾಣಿಯೂರು ಕೃಷ್ಣಾಪುರ ಸೇರಿದಂತೆ ಅಷ್ಟಮಠಾಧೀಶರು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.