ಬೆಳಾಲು ಮಾಯಾ ಮಹೇಶ್ವರನ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ : ಮಾ.6 ರಿಂದ ಮಾ.11

ಶ್ರೀ ಮಹೇಶ್ವರ ದೇವಸ್ಥಾನ ಮಾಯಾ ಬೆಳಾಲು ಇದರ ವಾರ್ಷಿಕ ಜಾತ್ರಾ ಮಹೋತ್ಸವವು, ನಾಳೆ 6/03/2020 ರಂದು ಪ್ರಾರಂಭವಾಗಲಿದ್ದು 10/3/2020 ರ ಮಂಗಳವಾರದವರೆಗೆ ನಡೆಯಲಿದೆ.

ಆಲಂಬಾಡಿ ವೇದಮೂರ್ತಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜಾತ್ರಾಮಹೋತ್ಸವದ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ : 6/3 /2020

ನಾಳೆ ಬೆಳಿಗ್ಗೆ ಗಣಹೋಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಬರಲಿದ್ದು ಆನಂತರ ಮಾಯಾ ಗುತ್ತಿನ ಮನೆಯಲ್ಲಿ ಸಾರಿ ಹಾಕಿ ಕಡಿಯುವುದು, ಕಾಣಿಕೆ ಸಮರ್ಪಣೆ, ಮಹಾಪೂಜೆ ಅನ್ನಸಂತರ್ಪಣೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 8.30 ಕ್ಕೆ ವಿಷ್ಣು ಕಲಾವಿದರು ಮದ್ದಡ್ಕ ಇವರು ನಟಿಸಿರುವ, ಅನಂತ ಎಸ್. ಇರ್ವತ್ತಾಯ ವಿರಚಿತ ‘ ನಾಗಡ ಕುಸಲ್ ಬೊಶ್ಚಿ’ ಎಂಬ ಸಾಮಾಜಿಕ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ದಿನಾಂಕ : 7/3 /2020

ಮುಂಜಾನೆ 7.00 ಗಂಟೆಗೆ ಗಣ ಹೋಮ ಕಲಶ ಪೂಜೆ ಎಂದಿಗೆ ಎರಡನೇ ದಿನದ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಆನಂತರ ಸಾಮೂಹಿಕ ಶ್ರೀ ಶನೇಶ್ವರ ಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6.30 ಕ್ಕೆ ದುರ್ಗಾ ಪೂಜೆ ಮಹಾಪೂಜೆ ಮತ್ತು ಉತ್ಸವ ನಡೆಯಲಿದ್ದು ನಂತರ ರಾತ್ರಿ ಊರಿನ ಹವ್ಯಾಸಿ ಕಲಾವಿದರು ಮತ್ತು ಕೀರ್ತಿವೆತ್ತ ಕಲಾವಿದರಿಂದ ರವಿಚಂದ್ರ ಕನ್ನಡಿಕಟ್ಟೆ ಇವರು ವಿರಚಿತ ‘ ಶ್ರೀ ಕೃಷ್ಣ ಲೀಲಾಮೃತ ‘ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

ಜಾತ್ರಾ ಮಹೋತ್ಸವ ಒಟ್ಟು ಆರು ದಿನಗಳ ಕಾಲ 11/03/2020 ರವರೆಗೆ ನಡೆಯಲಿದ್ದು, ನಾಗಬನದಲ್ಲಿ ನಾಗಬಂಧ ಪ್ರತಿಷ್ಠೆಯ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

**ಸರ್ವರಿಗೂ ಆದರದ ಸ್ವಾಗತ**

Leave A Reply

Your email address will not be published.