ಪರ್ಷಿಯನ್ ಪದ ‘ಮುಜರಾಯಿ’ ಇನ್ನಿಲ್ಲ | ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘- ಹೊಸ ಹೆಸರು
ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರಕಾರ ಮುಜರಾಯಿ ಇಲಾಖೆ ಎಂದು ಇವರಿಗೆ ಕರೆಯಲ್ಪಡುತ್ತಿದ್ದ ಹಿಂದೂ ಧಾರ್ಮಿಕ ಇಲಾಖೆಯ ಹೆಸರನ್ನು ಬದಲಿಸಿದೆ.
ಇನ್ನು ಮುಂದೆ ಮುಜರಾಯಿ ಇಲಾಖೆಗಳ ಬೋರ್ಡುಗಳು ಬದಲಾಗಿ ಅದು ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘ ಎಂದು ಬೋರ್ಡು ನೇತಾಡಿಸಿಕೊಳ್ಳಲಿವೆ.
ಮುಜರಾಯಿ ಇಲಾಖೆಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಸಂಸ್ಥೆ, 2011 ರ ಕಾಯ್ದೆಯ ಕೆಳಗಡೆ ಬರುತ್ತದೆ. ಮುಜರಾಯಿ ಇಲಾಖೆ ಹೆಸರನ್ನು ಬದಲಿಸುವಂತೆ ಮಂಗಳೂರಿನವರೇ ಆದ ದಿನೇಶ್ ಪೈ ಎಂಬ ಸಾಮಾಜಿಕ ಕಾರ್ಯಕರ್ತರು ಸರಕಾರವನ್ನು ಕೇಳಿಕೊಂಡಿದ್ದರು.
ಮುಜರಾಯಿ ಅಥವಾ ಮುಜ್ರಾಯಿ ಎಂಬ ಪದವು ಹಳೆಯ ಪರ್ಷಿಯನ್ ಶಬ್ದವಾಗಿದ್ದು ಅದನ್ನು ರಾಜ ಮಹಾರಾಜರ ಕಾಲದಿಂದ ಬಳಸಲಾಗುತ್ತಿದೆ. ಅದನ್ನೀಗ ಬದಲಿಸಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖೆಯ ಹೆಸರು ಬದಲಾಗಿದೆ.
ಇನ್ನು ಮುಂದೆ ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ‘ ; ಮುಜರಾಯಿ ಪದದ ಆಯುಷ್ಯ ಕರ್ನಾಟಕದಲ್ಲಿ ಮುುಗಿದಂತಿದೆ.