ವಿಟ್ಲ : ಕೆರೆಗೆ ಹಾರಿ ಯುವತಿ ಆತ್ಮಹತ್ಯೆ | ಡೆತ್‌ನೋಟ್ ಪತ್ತೆ,ಸಾವಿಗೆ ಕಾರಣರಾದವರ ಹೆಸರು ಉಲ್ಲೇಖ

Share the Article

ಬಂಟ್ವಾಳ : ಡೆತ್ ನೋಟ್ ಬರೆದಿಟ್ಟು ಯುವತಿಯೋರ್ವಳು ವಿಟ್ಲ ಪಂಚಲಿಂಗೇಶ್ವರ ದೇಗುಲದ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ರವರ ಮಗಳು, ವಿಟ್ಲದ ಡೆಂಟಲ್ ಕ್ಲಿನಿಕ್ ವೊಂದರಲ್ಲಿ ಉದ್ಯೋಗಿಯಾಗಿದ್ದ ನಿಶ್ಮಿತಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈ ಯುವತಿಯು ಅ 10 ರ ಸಂಜೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಮನೆಯವರು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ನಿಶ್ಮಿತಾ ರವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಕೆರೆಯ ದಡದಲ್ಲಿ ಆಕೆ ಬರೆದಿದ್ದಾರೆ ಎನ್ನಲಾದ ಸೂಸೈಡ್ ನೋಟ್ ಮತ್ತು ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಸೂಸೈಡ್ ನೋಟ್‌ನಲ್ಲಿ ಮೂವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಟ್ಲ : ಕೆರೆಗೆ ಹಾರಿ ಯುವತಿ ಆತ್ಮಹತ್ಯೆ | ಡೆತ್‌ನೋಟ್ ಪತ್ತೆ,ಸಾವಿಗೆ ಕಾರಣರಾದವರ ಹೆಸರು ಉಲ್ಲೇಖ

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ

Leave A Reply