ಇಂದಿನಿಂದ 2nd PUC ವಾರ್ಷಿಕ ಪರೀಕ್ಷೆ

Share the Article

ಮಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 4ರಿಂದ 23ರ ವರೆಗೆ ನಡೆಯಲಿದೆ.ಇದಕ್ಕಾಗಿ ಈಗಾಗಲೇ ಸಿದ್ದತೆ ನಡೆದಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಕರು ಗಮನ ಹರಿಸಬೇಕು. ಜಿಲ್ಲೆಗೆ ಯಾವುದೇ ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ದ.ಕ. ಜಿಲ್ಲೆಯ ಒಟ್ಟು 51 ಕೇಂದ್ರಗಳಲ್ಲಿ 34,346 ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ 15,100 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸಿಸಿಟಿವಿ ಕಣ್ಗಾವಲು ಪ್ರಮುಖವಾಗಿ ಟ್ರೆಜರಿ, ಇಲಾಖೆ ಹಾಗೂ ಪಿಯು ಬೋರ್ಡ್‌ನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಮೊಬೈಲ್‌ ಬಳಕೆಯನ್ನು ನಿಷೇಧಿಸಲಾಗಿದ್ದು, ಸೆಂಟರ್‌ ಕಸ್ಟೋಡಿಯನ್‌ಗೆ ಮಾತ್ರ ಬೇಸಿಕ್‌ ಫೋನ್‌ ಅಥವಾ ಲ್ಯಾಂಡ್‌ ಲೈನ್‌ನ್ನು ಮಾತ್ರ ಬಳಸುವ ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

Leave A Reply

Your email address will not be published.