Home latest ಯುವತಿಗೆ ಡ್ರಾಪ್ ನೀಡಿ ದೊಡ್ಡ ಆಘಾತಕ್ಕೆ ಸಿಲುಕಿದ ಯುವಕ | ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆದರಿಕೆಯೊಡ್ಡಿ...

ಯುವತಿಗೆ ಡ್ರಾಪ್ ನೀಡಿ ದೊಡ್ಡ ಆಘಾತಕ್ಕೆ ಸಿಲುಕಿದ ಯುವಕ | ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆದರಿಕೆಯೊಡ್ಡಿ ದರೋಡೆ ಮಾಡಿದ ಖತರ್ನಾಕ್ ಕಳ್ಳಿ !!

Hindu neighbor gifts plot of land

Hindu neighbour gifts land to Muslim journalist

ವಿಜಯನಗರ:ಯುವಕರು ಯುವತಿಯರಿಗೆ ಬೆದರಿಕೆ ಒಡ್ದುವುದು, ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ ಯುವಕರಿಗಿಂತ ನಾನೇನು ಕಮ್ಮಿ ಎಂಬಂತೆ ಯುವಕನಿಗೆ ಬೆದರಿಕೆಯೊಡ್ಡಿ ಕಳ್ಳತನ ಎಸಗಿರುವ ಘಟನೆ ಸಾರ್ವಜನಿಕರನ್ನು ಬೆರಗುಗೊಳಿಸಿದೆ.

ಈ ಘಟನೆ ಆಂಧ್ರ ಪ್ರದೇಶದ ವಿಜಯನಗರದಲ್ಲಿ ನಡೆದಿದೆ.ಅಪರಿಚಿತ ಯುವತಿಯೊಬ್ಬಳು ಡ್ರಾಪ್ ಕೇಳಿದಳು ಎಂದು ಯುವಕ ಬೈಕ್ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡು ಹೋದ ಬಳಿಕ ಆತನಿಗೆ ನಂಬಲಾಗದ ಆಘಾತವಾಗಿತ್ತು.

ವಿಜಯನಗರದಿಂದ ಗಜಪತಿನಗರದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಯುವಕನ ಯುವತಿಯೊಬ್ಬಳು ಡ್ರಾಪ್ ಕೇಳಿದ್ದಾಳೆ. ಹುಡುಗಿ ತಾನೇ ಅಂದುಕೊಂಡು ಬೈಕ್ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡಿದ್ದಾನೆ. ಬಳಿಕ ದವಳಪೇಟೆ ಸೇತುವೆ ಬಳಿ ಬೈಕ್ ನಿಲ್ಲಿಸುವಂತೆ ಹೇಳುತ್ತಾಳೆ. ಬಳಿಕ ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ ಬೈಕ್ ಅನ್ನು ಕೆಳಗೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾಳೆ. ಸರಿ ಅಂತ ಕೆಳಗಡೆ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಬೈಕ್‌ನಿಂದ ಕೆಳಗಿಳಿಯುವ ಯುವತಿ ಯುವಕನನ್ನು ಬೆದರಿಸಿ ಆತನಿಂದ ಚಿನ್ನದ ಸರವನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.

ಇದಾದ ಬಳಿಕ ಸಂತ್ರಸ್ತ ಯುವಕ ಜೋರಾಗಿ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿದ ಸ್ಥಳೀಯರು ಓಡಿ ಬಂದು ನೋಡಿದಾಗ ಆತ ಹೇಳಿದನ್ನು ಕೇಳಿ, ಯುವತಿ ಓಡಿ ಹೋಗುತ್ತಿರುವುದನ್ನು ನೋಡಿ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ತಕ್ಷಣ ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸುತ್ತಾರೆ.ಊರಿನವರಿಗೆ ಆತಂಕ ಉಂಟಾಗಿ, ಇಂತಹ ಹುಡುಗಿಯರು ಇದ್ದಾರಾ ಎಂದು ಸ್ಥಳೀಯರು ಹುಬ್ಬೇರಿಸಿದ್ದಾರೆ m

ಸಂತ್ರಸ್ತ ಯುವಕ ಹಣಕಾಸು ವ್ಯವಹಾರಸ್ಥ ವಿಜಯನಗರದಲ್ಲಿ ವಾಸವಿದ್ದ ಆತ ಪ್ರತಿನಿತ್ಯ ಗಜಪತಿನಗರಕ್ಕೆ ಭೇಟಿ ನೀಡುತ್ತಿದ್ದ. ಈ ವಿಚಾರ ಆರೋಪಿ ಯುವತಿಗೆ ಮೊದಲೇ ತಿಳಿದಿತ್ತು. ಬಳಿಕ ಆತನ ಸುಲಿಗೆ ನಡೆಸಲು ಸಂಚು ರೂಪಿಸಿದ್ದಳು. ಕೊನೆಗೂ ತನ್ನ ಸಂಚು ಕಾರ್ಯರೂಪಕ್ಕಿಳಿಸಿದ ಯುವತಿ, ಯುವಕನಿಂದ ಭಾರಿ ಮೌಲ್ಯದ ಚಿನ್ನದ ಸರವನ್ನು ಎಗರಿಸಲು ಹೋಗಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇದೇ ಮೊದಲೇನಲ್ಲ ಈಕೆ ಈ ಹಿಂದೆ ಅನೇಕ ಸರಗಳ್ಳತನ ಮಾಡಿರುವ ಉದಾಹರಣೆಗಳಿದ್ದು,ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆಕೆಯ ದುಷ್ಕೃತ್ಯ ಬಯಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.