ಇನಿ‌ ಉಬಾರ್ ವಿಜಯ-ವಿಕ್ರಮ ಕಂಬುಲ| ಅಲೆ ಬುಡಿಯೆರ್..!

ಕಿದೆಟ್ ಕಟ್ಟ್‌ ಪಾಡ್ದಿನ ಗೋಣೆರ್‌ ಬೀಲ ಬೀಜಾವೊಂದುಲ್ಲ,ಬಲ್ಲ್‌ ಒಯ್ತೊಂದುಲ್ಲ ಸುನಿಪುಣವು ಇಲ್ಲದ ಉಳಾಯಿಗ್ಲ ಕೇನೊಂದುಂಡು, ಕಾರ್ ಕೆರೆತುದು ಹೂಂಕರಿಸೊಂದುಲ್ಲ.. ಅವು ಕೂಲಿ ಆಗಿಯೊಂದು, ಕೊಂಬು ಮಸೇವೊಂದು , ಅವ್ವೆನ ಜೋಡಿದ ಒಟ್ಟಿಗೇ ಜಗಳ ಶುರುಮಲ್ಟುದೋ.

ಲಕ್ಕುಬೋ ಜೆಪ್ಪುಬೋ ನಲಿಪುಬೋ….. ಊಹೂಂ ಅವ್ವೆಕ್ ನಿದ್ರೆ ಬರೊಂಡಿಜ್ಜಿ…… ಕೋಡೆ ಹಿರೇಬಂಡಾಡಿದ ಉಳ ತೋಡಿ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶ, ಬುಕ್ಕ ಗೆಜ್ಜೆಗಿರಿ ಕೋಟಿ-ಚೆನ್ನಯ ಕ್ಷೇತ್ರದ ಬ್ರಹ್ಮಕಲಶಗೂ ಪೋದು ಬನ್ನಗ ನಡುರಾತ್ರಿ. ಜೆತ್ತಿನಗ್ಲೆಗ್ ಮಲ್ಲ ನಿದ್ರೆ.

ಅಪಗ ಸದನ್ನಾತ್ ಎಚ್ಚರ ಆಂಡ್. ಮಲ್ಲ ರಾಮಾರಂಪಾ ಆವೊಂದುದು…ಕಿದೆ ಅಳೆಗೊಂದುಂಡ್……. ಕಣ್ಣು ಎಳೆಯುತ್ತಿದ್ದ ನಿದ್ದೆ ಒಮ್ಮೆಲೇ ಕಣ್ಮರೆ. ಕಂಬಳದ ಕರೆಯಲ್ಲಿ ಹೂಂಕರಿಸಿ ಓಡಿ ತನ್ನ ಧನಿಗೆ ಮೆಡಲ್ ಗೆದ್ದು ” ನಮ ಎಂಚ ? ” ಎಂದು ಹೆಮ್ಮೆಯಿಂದ ಕಣ್ಣ ಸನ್ನೆಯಿಂದಲೆ ಕೇಳಲು ಕಾಯುತ್ತಿರುವ ನಮ್ಮ ಕೋಣ ಮಿತ್ರರ ಉತ್ಸಾಹ ನಮ್ಮಲ್ಲಿ ಇಮ್ಮಡಿ ಉತ್ಸಾಹ ಮೂಡಿಸಿದೆ.

ಪುತ್ತೂರು ಕಂಬುಲ ಚಿತ್ರ: ಪ್ರಸನ್ನ ರೈ ತಿಂಗಳಾಡಿ

ವರ್ಷವಿಡಿ ಪುಷ್ಕಳ ಆಹಾರ ತಿಂದು, ಬೆಳೆಸಿ ಕೊಂಡ ಮೈಯನ್ನು ಸಿಕ್ಸ್ ಪ್ಯಾಕ್ ಆಗಿಟ್ಟುಕೊಂಡ್ ಕೋಣಗಳಿಗೆ ಇವತ್ತು ವಿಜಯ ವಿಕ್ರಮ ಕಂಬಳದ ಒಲಿಂಪಿಕ್ಸ್!

ಅಲೆ ಬುಡಿಯೆರ್‌‌ ಗೆ ಧನಿಗೆ ಕಾಯುತ್ತಿದ್ದಾರೆ ಕಂಬಳಾಭಿಮಾನಿಗಳು,ಕೋಣದ ಯಜಮಾನರು…

ಕೊಡಿಂಬಾಡಿಯ ಶ್ರೀ ಅಶೋಕ್ ಕುಮಾರ್ ರೈ ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕೃಷಿ ಪ್ರಧಾನ ಜನರ ಪುರಾತನ ಜಾನಪದ ಕ್ರೀಡೆ ಈ ದಿನ ತನ್ನೆಲ್ಲಾ ಸೊಬಗು ಮತ್ತು ರೋಮಾಂಚಕತೆಗಳಿಂದ ಕಳೆಗಟ್ಟಲಿದೆ.

ಇಂದು ಫೆ.29- 35 ನೇ ವರ್ಷದ ವಿಜಯ ವಿಕ್ರಮ ಜೋಡುಕರೆ ಕಂಬಳ ಉಪ್ಪಿನಂಗಡಿಯ ನೇತ್ರಾವತಿ ನದಿಯ ಕೂಟೇಲು ಕಿನಾರೆಯಲ್ಲಿ ನಡೆಯಲಿದೆ.

8:55 ರಿಂದ ಮೆರವಣಿಗೆಯ ಮೂಲಕ ಕಾರ್ಯಕ್ರಮವು ಪ್ರಾರಂಭವಾಗಲಿದ್ದು ಕಂಬಳದ ಮೆರವಣಿಗೆಯ ಉದ್ಘಾಟನೆಯನ್ನು ಪುತ್ತೂರಿನ ತಹಶೀಲ್ದಾರ್ ಶ್ರೀಯುತ ರಾಹುಲ್ ಶಿಂಧೆ ಅವರು ನೆರವೇರಿಸಲಿದ್ದಾರೆ.

ಸಂಗ್ರಹ ಚಿತ್ರ

10:31ಕ್ಕೆ ವಿಜಯ ವಿಕ್ರಮ ಜೋಡುಕರೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ತಾಲೂಕ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣನ್ ಅವರು ನೆರವೇರಿಸಲಿದ್ದಾರೆ.

ಶ್ರೀಧನ್ಯ ಕುಮಾರ್ ರೈ ಬಿಳಿಯೂರು ಗುತ್ತು, ಶ್ರೀಮತಿ ಶಯನಾ ದಯಾನಂದ, ಜಿಲ್ಲಾ ಪಂಚಾಯತ್ ಸದಸ್ಯರು, ಅಬ್ದುಲ್ ರಹಿಮಾನ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು; ಶ್ರೀ ಕರುಣಾಕರ ಸುವರ್ಣ ಮಾಜಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಸಹಸ್ರಲಿಂಗೇಶ್ವರ ದೇವಸ್ಥಾನ; ಶ್ರೀಮತಿ ಹೇಮಲತಾ ಶೆಟ್ಟಿ, ಉಪಾಧ್ಯಕ್ಷರು ಉಪ್ಪಿನಂಗಡಿ ಗ್ರಾಮ ಪಂಚಾಯತ್; ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ ತಾಲೂಕ್ ಪಂಚಾಯತ್ ಸದಸ್ಯರು ಉಪ್ಪಿನಂಗಡಿ; ಶ್ರೀ ವಿಶ್ವನಾಥ ಶೆಣೈ, ಹವಾಲ್ದಾರ್ ಭಾರತೀಯ ಸೇನೆ;  ಶ್ರೀ ಪ್ರವೀಣ್ ಕುಮಾರ್ ಕಡಿಕ್ಕಾರ ಬೀಡು;  ಶ್ರೀ ಸಂಕಪ್ಪ ಶೆಟ್ಟಿ ಮಾಜಿ ಮೊಕ್ತೇಸರರು; ಶ್ರೀ ರಾಜೇಶಣ್ಣ ಮಾಲಕರು ರಾಜೇಶ್ ಎಲೆಕ್ಟ್ರಿಕಲ್ಸ್;
ದೇವಸ್ಥಾನ ರಾಜೇಶ್ವರಿ ಮಹಾಕಾರ್ಯದರ್ಶಿ ಕಟ್ಟಡ ಕಾರ್ಮಿಕ ಸಂಘ, ಶ್ರೀ ಮಹಾಲಿಂಗ ಕಜೆಕ್ಕಾರು ಕಾರ್ಯದರ್ಶಿ ಕಟ್ಟಡ ಕಾರ್ಮಿಕ ಸಂಘ, ಉಪ್ಪಿನಂಗಡಿ ಮುಂತಾದ ಗಣ್ಯರ ಗೌರವ ಉಪಸ್ಥಿತಿ ಇರಲಿದೆ.

ಸಂಗ್ರಹ ಚಿತ್ರ

ಕೊಡಿಂಬಾಡಿಯ ಶ್ರೀ ಅಶೋಕ್ ಕುಮಾರ್ ರೈ ಇವರ ನೇತೃತ್ವದಲ್ಲಿ ನಡೆಯಲಿರುವ ಈ  ಕೃಷಿ ಪ್ರಧಾನ ಜನರ ಪುರಾತನ ಜಾನಪದ ಕ್ರೀಡೆ ಈ ದಿನ ತನ್ನೆಲ್ಲಾ ಸೊಬಗು ಮತ್ತು ರೋಮಾಂಚಕತೆಗಳಿಂದ ಕಳೆಗಟ್ಟಲಿದೆ.

ಇಂದಿನ ಕಂಬಳದಲ್ಲಿ ಒಟ್ಟು 6 ವಿಭಾಗಗಳಿವೆ. ಆಯಾ ವಿಭಾಗದಲ್ಲಿ ಕೋಣೆಗಳು ಕರೆಗೆ ಹಿಡಿಯುವ ಸಮಯ ಹೀಗಿದೆ.

ನೇಗಿಲು ಕಿರಿಯ: ಬೆಳಿಗ್ಗೆ 10.45
ಹಗ್ಗ ಹಿರಿಯ: ಬೆಳಿಗ್ಗೆ 11.30
ನೇಗಿಲು ಹಿರಿಯ: ಮಧ್ಯಾಹ್ನ 12.30
ಹಗ್ಗ ಹಿರಿಯ: ಮದ್ಯಾಹ್ನ 2.00
ಅಡ್ಡಹಲಗೆ: ಸಾಯಂಕಾಲ 4.00
ಕನೆಹಲಗೆ: ಸಾಯಂಕಾಲ 4.00

6:00 ಗಂಟೆಗೆ ಸಭಾ ಕಾರ್ಯಕ್ರಮವಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿವಿ ಸದಾನಂದ ಗೌಡರು ಗೌರವಾನ್ವಿತ ಕೇಂದ್ರ ಸಚಿವರು ನೆರವೇರಿಸಲಿದ್ದಾರೆ.

ಸಂಜೆಯ ಕಾರ್ಯಕ್ರಮದಲ್ಲಿ ಶ್ರೀ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯದ್ಯಕ್ಷರು; ಶ್ರೀ ಸಂಜೀವ ಮಠಂದೂರು ಶಾಸಕರು;  ಶ್ರೀ ಜನಾರ್ದನ ರೆಡ್ಡಿ ಮಾಜಿ ಸಚಿವರು; ಶ್ರೀ ಬಿ ರಮಾನಾಥ ರೈ, ಮಾಜಿ ಸಚಿವರು; ಶ್ರೀ ಪ್ರಕಾಶ್ ಶೆಟ್ಟಿ ಎಮ್ ಅರ್ ಜಿ ಗ್ರೂಪ್;  ಶ್ರೀ ಎಂಎಂ ರಾಜೇಂದ್ರಕುಮಾರ್ ಅಧ್ಯಕ್ಷರು ಏಸ್ಸಿಡಿಸಿಸಿ ಬ್ಯಾಂಕ್, ಶ್ರೀ ಮೋಹನ್ ಆಳ್ವಾ , ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು ಮತ್ತಿತರ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Leave A Reply

Your email address will not be published.