ಈಕೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ 650ಗ್ರಾಂ ಕೂದಲು | ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಈ ಬಾಲಕಿ !
ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆಯಾದರೆ ವಿಚಿತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತೆಯೇ ಕ್ಯಾಲ್ಸಿಯಂ ಕೊರತೆಯಿಂದ ಚಿಕ್ಕ ಮಕ್ಕಳು ಮಣ್ಣು ತಿನ್ನುವುದು ಸಹಜ. ಇದರ ಅನುಭವ ನಿಮ್ಮ ಮನೆಯಲ್ಲೂ ಆಗಿರಬಹುದು. ಆದರೆ ಮಣ್ಣು ತಿನ್ನುವುದು ಸಹಜವೆನಿಸಿದರೂ, ಕೂದಲು ತಿನ್ನುವುದು ಸ್ವಲ್ಪ ವಿಚಿತ್ರವೇ ಸರಿ !
ಹೌದು, ಇಲ್ಲೊಬ್ಬಳು ಬಾಲಕಿ ಪೋಷಕಾಂಶದ ಕೊರತೆಯಿಂದ ಸುಮಾರು ಹತ್ತು ವರ್ಷದಿಂದ ಕೂದಲನ್ನು ತಿನ್ನುತ್ತಿದ್ದಳು. ಚಿಕ್ಕಂದಿನಿಂದಲೂ ಕೂದಲು ತಿನ್ನುತ್ತಲೇ ಆರೋಗ್ಯವಾಗಿದ್ದ ಇದ್ದ 12 ವರ್ಷದ ಬಾಲಕಿ ಶ್ರೀಲಕ್ಷ್ಮಿ ಕನೋಜಿಯಾ ಹೊಟ್ಟೆಯಿಂದ ಇದೀಗ ಸುಮಾರು 650 ಗ್ರಾಂ ಕೂದಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಈ ಪರಿಯ ಕೂದಲು ಹೊಟ್ಟೆಯಲ್ಲಿ ಜೀರ್ಣವಾಗದೇ ಇರುವುದನ್ನು ಕಂಡು ವೈದ್ಯರೇ ಅಚ್ಚರಿಪಟ್ಟುಕೊಂಡಿದ್ದಾರೆ.
ಮಹಾರಾಷ್ಟ್ರದ ಕಲ್ಯಾಣದ ನಿವಾಸಿಯಾಗಿರುವ ಬಾಲಕಿ ಎರಡು ವರ್ಷದ ಮಗುವಾಗಿದ್ದಾಗಿನಿಂದಲೂ ಕೂದಲನ್ನು ತಿನ್ನುವ ಚಟವಿತ್ತು. ಈ ಚಟವನ್ನು ಬಿಡಿಸಲು ಪಾಲಕರು ಹಲವು ರೀತಿಯಲ್ಲಿ ಯತ್ನಿಸಿದ್ದರು. ಆದರೆ ಆಕೆ ಮಾತ್ರ ಕೇಳುತ್ತಿರಲಿಲ್ಲ. ಇದರಿಂದ ಯಾವುದೇ ಅನಾರೋಗ್ಯ ಸಮಸ್ಯೆ ಆಗದ್ದನ್ನು ಗಮನಿಸಿದ್ದ ಪಾಲಕರು ದೊಡ್ಡವಳಾದ ಮೇಲೆ ಸರಿಯಾಗುತ್ತದೆ ಎಂದು ಸುಮ್ಮನಾಗಿದ್ದರು.
ಆದರೆ ಈತ್ತೀಚೆಗೆ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ
ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಕೂದಲು ಕಾಣಿಸಿಕೊಂಡಿದ್ದು, ಆಕೆಯ ಕರುಳಿನಲ್ಲಿ ಸಿಲುಕಿತ್ತು. ಸುಮಾರು ಇದೇ ಕಾರಣದಿಂದ ಆಕೆಗೆ ಎರಡು ತಿಂಗಳಿಂದ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು.
ವೈದ್ಯರು ತಕ್ಷಣ ಈಕೆಗೆ ಆಪರೇಷನ್ ಮಾಡಿ ಕೂದಲನ್ನು ಹೊರತೆಗೆದಿದ್ದಾರೆ. ಸುಮಾರು 650 ಗ್ರಾಂ ಕೂದಲು ಆಪರೇಷನ್ ಮಾಡುವಾಗ ದೊರಕಿದೆ ಎಂದು ವೈದ್ಯರು ತಿಳಿಸಿದ್ದಾರೆ.