Home News ಗೂಗಲ್ ಪೇ, ಫೋನ್ ಪೇ ಮಾಡುವಾಗ ಎಚ್ಚರ | ಸ್ವಲ್ಪ ಯಾಮಾರಿದ್ರೂ ಅಕೌಂಟ್ ಖಾಲಿ !

ಗೂಗಲ್ ಪೇ, ಫೋನ್ ಪೇ ಮಾಡುವಾಗ ಎಚ್ಚರ | ಸ್ವಲ್ಪ ಯಾಮಾರಿದ್ರೂ ಅಕೌಂಟ್ ಖಾಲಿ !

Hindu neighbor gifts plot of land

Hindu neighbour gifts land to Muslim journalist

ಈ ಭೂಮಿಯ ಮೇಲೆ ತಂತ್ರಜ್ಞಾನ ಹೇಗೆ ಮುಂದುವರೆದಿದೆಯೋ, ಅದೇ ರೀತಿಯಲ್ಲಿ ಮೋಸ ಮಾಡುವವರ ಸಂಖ್ಯೆ ಕೂಡ ಅಷ್ಟೇ ಮುಂದುವರೆದಿದೆ ಎಂದರೆ ತಪ್ಪಾಗಲಾರದು. ಕೋಟ್ಯಾಂತರ ಜನರು ಹಣ ವರ್ಗಾವಣೆ ಮತ್ತು ಹಣವನ್ನು ಪಾವತಿ ಮಾಡಲು ಗೂಗಲ್ ಪೇ ಮತ್ತು ಫೋನ್ ಪೇ ಬಳಕೆ ಮಾಡುತ್ತಿದ್ದು, ಇದೀಗ ಅಂತಹವರಿಗೆ ಬಹು ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕುಗಳಿಗೆ ಹೋಗುವ ಬದಲು ತಮ್ಮ ಮೊಬೈಲ್ ನಲ್ಲಿಯೇ ಹಣವನ್ನು ಪಾವತಿ ಮಾಡುವುದರ ಮೂಲಕ ಸಮಯವನ್ನು ಉಳಿಸುತ್ತಿದ್ದಾರೆ ಎಂದು ಹೇಳಬಹುದು.

ಹಣ ವರ್ಗಾವಣೆ ಮತ್ತು ಪಾವತಿ ಮಾಡಲು ದೇಶದಲ್ಲಿ ಹಲವು ಅಪ್ಲಿಕೇಶನ್ ಗಳು ಇದ್ದು, ಜನರು ಅದನ್ನು ಬಳಕೆ ಮಾಡುತ್ತಿದ್ದಾರೆ. ಜನರು ಹಣ ವರ್ಗಾವಣೆ ಮತ್ತು ಪಾವತಿ ಮಾಡಲು ಬಳಸುವ ಅಪ್ಲಿಕೇಶನ್ ಗಳಲ್ಲಿ ಗೂಗಲ್ ಪೇ, ಫೋನ್ ಪೇ ಬಹು ಮುಂದಿರುವ ಆಪ್ ಗಳಾಗಿವೆ.

ಸ್ನೇಹಿತರೇ, ನೀವು ಕೂಡ ಗೂಗಲ್ ಪೇ, ಫೋನ್ ಪೇ ಬಳಸುತಿದ್ದೀರಾ? ಹಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗುವುದು ಪಕ್ಕಾ ಎಂದು ಹೇಳಬಹುದು.

ಇಂದೊಂದು ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೀಗಮಾಕಲಹಳ್ಳಿಯ ವಿ ಮಂಜುನಾಥ್ ಎಂಬುವರಿಗೆ ನಡೆದಿದ್ದು, ಗೂಗಲ್ ಪೇ ಗ್ರಾಹಕರ ಸೇವಾ ಕೇಂದ್ರದಿಂದ ಕರೆ ಮಾಡ್ತಾ ಇದ್ದೀವಿ ಎಂಬುದಾಗಿ ಕರೆ ಮಾಡಿದ ಆನ್ ಲೈನ್ ವಂಚಕರು, ಹೇಗೋ ರೂ.74,499 ವಂಚಿಸಿರೋದು ತಿಳಿದು ಬಂದಿದೆ.

ಇದೊಂದೇ ಘಟನೆ ಅಲ್ಲದೆ, ಇನ್ನೂ ಅದೆಷ್ಟೋ ಜನರು ಹೀಗೆ ಹಣವನ್ನು ಕಳೆದುಕೊಂಡಿರುವುದು ದೇಶದಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು.

ಯಾವುದೇ ಬ್ಯಾಂಕಿನ ಗ್ರಾಹಕರು ಹೀಗೆ ಕಾಲ್ ಮಾಡಿ ಒಟಿಪಿ ಅಥವಾ ಇತರೆ ಗೌಪ್ಯ ಮಾಹಿತಿಯನ್ನು ಕೇಳುವುದಿಲ್ಲ. ದಯವಿಟ್ಟು ಈ ರೀತಿಯ ಕರೆಗಳಿಗೆ ಕಿವಿಗೊಡಬೇಡಿ. ಆದ್ದರಿಂದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ, ಈ ರೀತಿಯ ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಿ.