” ಬಾಲವನಕ್ಕೆ ಹೆಜ್ಜೆ ಇಡೋಣ, ಕಾರಂತರ ಕನಸುಗಳಿಗೆ ಜೀವ ತುಂಬೋಣ…” | ಆಕರ್ಷಕ ಜಾನಪದ ಕುಣಿತದೊಂದಿಗೆ ಜಾಥಾ ಆರಂಭ

ಪುತ್ತೂರು : ಮಂಡ್ಯದ ಡೊಳ್ಳು ಕುಣಿತ, ನಂದಿ ಕೋಲು, ತಮಟೆ, ಯಕ್ಷಗಾನ ವೇಷಧಾರಿಗಳು, ಬಡಿಯುವ ಬ್ಯಾಂಡು ಸೆಟ್ಟು, ಸಮವಸ್ತ್ರ ಧರಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸೇರಿಕೊಂಡು ಬಾಲಭವನಕ್ಕೆ ಹೆಜ್ಜೆ ಹಾಕುವ ಉತ್ಸಾಹಿ ಜನರು ಎಲ್ಲರೂ ಸೇರಿಕೊಂಡು ಬಾಲವನಕ್ಕೆ ಹೆಜ್ಜೆ ಇಡೋಣ – ಕಾರಂತರ ಕನಸುಗಳಿಗೆ ಜೀವ ತುಂಬೋಣ… ಸಾಂಸ್ಕೃತಿಕ ಜಾಥಾಕ್ಕೆ ಹೊಸ ಮೆರುಗು ಬಂದಿದೆ.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ದಿ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಉಪವಿಭಾಗ, ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ – ಕಾರಂತರ ಕನಸುಗಳಿಗೆ ಜೀವ ತುಂಬೋಣ… ಸಾಂಸ್ಕೃತಿಕ ಜಾಥಾವು ಫೆ.27ರಂದು ಬೆಳಿಗೆ 8.45ಕ್ಕೆ ಪುತ್ತೂರು ಬಸ್‌ನಿಲ್ದಾಣದಿಂದ ಬಾಲವನದವರೆಗೆ ಭರ್ಜರಿಯಾಗಿ ಪ್ರಾರಂಭವಾಗಿದೆ.

ಜಾಥಾ ಕಾರ್ಯಕ್ರಮವನ್ನು ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದಿನ್ ಸಂಪ್ಯ, ರಾಜ್ಯದ ಎಲ್ಲ ಯುವ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಮೆರವಣಿಗೆ ಸಾಗುವ ಉದ್ದಕ್ಕೂ ಕಂಡುಬಂದ ದೃಶ್ಯ.

Leave A Reply

Your email address will not be published.