ವೈದ್ಯೆಯ ಸಾವಿಗೆ ಕಾರಣನಾದ ಆಕೆಯ ಪತಿ ಆರ್.ಟಿ.ಓ ಕೆಲಸದಿಂದ ವಜಾ

Share the Article

ಪತ್ನಿಯ ಸಾವಿಗೆ ಕಾರಣನಾದ ಪತಿ ಆರ್‌ಡಿ.ಓ ಒಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ವರದಕ್ಷಿಣೆ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿ ಕಿರಣ್ ಎಂಬಾತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಕೇರಳದ ಕೊಲ್ಲಂನಲ್ಲಿ ಪತ್ನಿ, ವೈದ್ಯೆ ಎಸ್ಎ ವಿಸ್ಮಯ ಅವರಿಗೆ ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿ ಎಸ್ ಕಿರಣ್ ಕುಮಾರ್ ನನ್ನು ಸೇವೆಯಿಂದ ವಜಾಗೊಳಿಸುವಂತೆ ಕೇರಳ ಸಾರಿಗೆ ಇಲಾಖೆ ನಿರ್ಧರಿಸಿದೆ.

30 ವರ್ಷದ ಕಿರಣ್ ಕುಮಾರ್ ಅವರು ಕೊಲ್ಲಂನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯಕ ಮೋಟಾರ್ ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇಲಾಖೆಯ ಆಂತರಿಕ ವಿಚಾರಣೆಯಲ್ಲಿ ಕಿರಣ್ ಕುಮಾರ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಂದು ಕೇರಳದ ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

Leave A Reply