ಸುಳ್ಯ : ಬಿಜೆಪಿ ಮುಖಂಡ ಸುರೇಶ್ ಕಣೆಮರಡ್ಕ ಅವರ ಕಾರಿಗೆ ಲಾರಿ ಡಿಕ್ಕಿ

Share the Article

ಸುಳ್ಯ : ಮಂಗಳೂರು ಕಡೆಯಿಂದ ಬೆಂಗಳೂರಿಗೆ ಕೊರಿಯರ್ ಪಾರ್ಸೆಲ್ ಕೊಂಡೊಯ್ಯುತ್ತಿದ್ದ ಈಚರ್ ಲಾರಿಯೊಂದು ಸುಳ್ಯ ಕಡೆಯಿಂದ ಜಾಲ್ಸೂರು ಕಡೆಗೆ ಹೋಗುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದು ಢಿಕ್ಕಿ ಹೊಡೆದ ಘಟನೆ ವರದಿಯಾಗಿದೆ.

ಮಂಡೆಕೋಲು ಬಿಜೆಪಿ ಮುಖಂಡ ಸುರೇಶ್ ಕಣೆಮರಡ್ಕ ಪ್ರಯಾಣಿಸುತ್ತಿದ್ದ ಕಾರಿಗೆ ಎದುರುಗಡೆಯಿಂದ ಬರುತ್ತಿದ್ದ ಲಾರಿಯು ಟ್ಯಾಂಕರ್‌ನ್ನು ಓವರ್‌ಟೇಕ್ ಮಾಡುವ ಸಂದರ್ಭ ವಿರುದ್ಧ ದಿಕ್ಕಿನಿಂದ ನೇರವಾಗಿ ಬಂದು ಡಿಕ್ಕಿ ಹೊಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸಮೇತ ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣವಗಿ ಜಖಂಗೊಂಡಿದೆ.

Leave A Reply