‘ ನನ್ನೊಳಗಿನ ನುಡಿ ‘ | ಬರೆದಿದ್ದಾರೆ ನೋಡಿ ನಮ್ಮಣ್ಣ ನಾರಾಯಣ ರೈ ಕುಕ್ಕುವಳ್ಳಿ
ಹಿರಿಯ ಶಿಕ್ಷಕ, ಬರಹಗಾರ, ಸಂಪಾದಕ, ಕಾರ್ಟೂನಿಸ್ಟ್, ಕೃಷಿಕ ಮತ್ತು ಮುಖ್ಯವಾಗಿ ಪರಿಸರಪ್ರೇಮಿ ನಾರಾಯಣ ರೈ ಕುಕ್ಕುವಳ್ಳಿ ಸರ್ ಹೊಸಕನ್ನಡಕ್ಕಾಗಿ ಬರೆದಿದ್ದಾರೆ. ಅವರಿಗೆ ಹಸಿರು ಹುಲ್ಲಿನ ಮೆತ್ತಗಿನ ಹಾಸಿನ ಸ್ವಾಗತ !
ನಾರಾಯಣ ರೈ ಕುಕ್ಕುವಳ್ಳಿ ಸರ್ ನಾಡಿನ ಹೆಮ್ಮೆ. ಹೊಸಕನ್ನಡದಲ್ಲಿ ಅವರ ಅಕ್ಷರ ಮೂಡಿದ್ದು ನಮ್ಮ ಹೆಮ್ಮೆ! –ಸಂಪಾದಕ.
? ನನ್ನೊಳಗಿನ ನುಡಿ ?
ನಾವು ನಮ್ಮ ನಾಳೆಗಳ ಬಗ್ಗೆ ಚಿಂತನೆ ಮಾಡುವ ಮೊದಲು ಇಂದು ಏನಾಗಿದೆ…ನಿನ್ನೆ ಏನಾಗಿತ್ತು? ಚಿಂತಿಸ ಬೇಕಾಗಿದೆ.ಹೌದು ನನ್ನ ಬಾಲ್ಯದಲ್ಲಿ ಶಾಂತಿ ನೆಮ್ಮದಿ ಪ್ರೀತಿ ಭಯ ಭಕ್ತಿ….ಎಲ್ಲಾ ಇತ್ತು.
ನನ್ನೂರಿನ ಬಯಲು ಹಸಿರು ಹಸಿರಾಗಿತ್ತು. ಮಾರ್ಚಿ ಎಪ್ರಿಲ್ ತಿಂಗಳಲ್ಲೂ ಮನೆಯ ಎದುರಿನ ಕಣಿವೆಯಲ್ಲಿ ನೀರು ಹರಿಯುತ್ತಿತ್ತು. ಕಟ್ಟದಲ್ಲಿ ನೀರು ಲಕಲಕ ಅನ್ನುತ್ತಿತ್ತು….
ಈಗ ಸುಡುವ ಆಕಾಶ…ಕೃಷಿ-ಕುಡಿಯಲು ನೀರಿಗೆ ಬರ…ಮಳೆಗಾಲದಲ್ಲಿ ಸರಿಯಾಗಿ ಮಳೆ ಇಲ್ಲ…ಬಂದರೆ ಊರೇ ಕೊಚ್ಚಿ ಹೋಗುವ ಪ್ರವಾಹ…ಭೂ ಕುಸಿತ….
ಈಗ ಸುತ್ತಲಿನ ಕಾಡು ಬರಡಾಗಿದೆ. ಮುಗಿಲೆತ್ತರ ಕಟ್ಟಡ ಮಹಲು ಎದ್ದು ನಿಂತಿದೆ. ಭಾಷೆ ವೇಷ ಬದಲಾಗಿದೆ. ತಾಳ್ಮೆ ಸಹನೆ ಇಲ್ಲದಾಗಿದೆ…ಹೆತ್ತವರ ಗುರು ಹಿರಿಯರ ಮಾ ತು ಕೇಳವವರೇ ಇಲ್ಲ. ಎಲ್ಲ ನಮ್ಮದೇ ಯೋಚನೆ, ಯೋಜನೆ….
ಮತ್ತೆ ಹಸಿರ ಕಾಣಬೇಕು…ಸಮೃದ್ಧ ನೀರ ಸೆಳೆ ಇರಬೇಕು.ಕಾಲಕ್ಕೆ ಸರಿಯಾಗಿ ಮಳೆ ಬರಬೇಕು.ತಾಪ ತಣಿಯಬೇಕು.ಈ ಬೇಕುಗಳು ಸಾಕಾರವಾಗುವುದಾದರೂ ಹೇಗೆ?ನಾಳೆ ಹೇಗಿರ ಬೇಕೆಂಬ ಚಿಂತೆ.
ಕಾಡಿನಲ್ಲಿ ಮತ್ತೆ ಮರಗಳು ಸಮೃದ್ಧವಾಗಬೇಕು. ಅನಾದಿ ಕಾಲದಲ್ಲಿ ಇವುಗಳನ್ನು ಯಾರು ನೆಟ್ಟರೋ?…ಪ್ರಕೃತಿ ಮಾತೆಗೆ ಗೊತ್ತು. ಖ್ಯಾತ ಪರಿಸರ ತಜ್ಙರಾದ ನಾಗೇಶ ಹೆಗ್ಗಡೆಯವರ “ನಾವೆಲ್ಲ ಸ್ನೇಹಿತರು ಮಳೆಗಾಲದಲ್ಲಿ ಕಾರಿನಲ್ಲಿ ಸಾಗುತ್ತಾ ರಸ್ತೆ ಇಕ್ಕೆಲಗಳಲ್ಲಿ ಹೊನ್ನೆ, ಹೊಂಗೆ, ಧೂಪ, ನೇರಳೆಯಂತಹ ಬೀಜಗಳನ್ನು ಬಿಸಾಕುತ್ತಾ ಸಾಗುತ್ತೇವೆ….” ಎಂಥ ಪರಿಸರ ಚಿಂತನೆ.
ನಾವೂ ನೀವೂ ನಾಳೆಗಾಗಿ ಹೀಗೆ ಮಾಡಿದರೆ ಹೇಗೆ….????
ನಾರಾಯಣ ರೈ ಕುಕ್ಕುವಳ್ಳಿ