ಕಾವು ಬಳಿ ಮತ್ತೊಂದು ಅಪಘಾತ । ಮಿನಿ ಲಾರಿ ಒಮ್ನಿ ಡಿಕ್ಕಿ

ಪುತ್ತೂರು : ಇಲ್ಲಿನ ಕಾವು ತಿರುವಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಮೂರು ದಿನಗಳ ಹಿಂದೆಯಷ್ಟೇ ನಡೆದ ಸರಣಿ ವಾಹನ ಅಪಘಾತದ ಬಗ್ಗೆ ಸುದ್ದಿಯಾಗಿತ್ತು. ಮತ್ತೆ ಇವತ್ತು ಬೇಳಿಗ್ಗೇ ಹೆಚ್ಚು ಕಮ್ಮಿ ಆಸುಪಾಸಿನಲ್ಲೇ ಈ ಆಕ್ಸಿಡೆಂಟ್ ನಡೆದಿದೆ.

ಪುತ್ತೂರು ಕಡೆಯಿಂದ ಸುಳ್ಯಕ್ಕೆ ಹಸಿ ಮೀನು ಮಾರಾಟದ ಮಿನಿ ಟೆಂಪೋ ಹೋಗುತ್ತಿತ್ತು. ಎದುರುಗಡೆಯಿಂದ ಬಂದ ಮಾರುತಿ ಓಮ್ನಿ ಕಾರು ಕಾವು ತಿರುವಿನಲ್ಲಿ ಎದುರಾ ಎದುರು ಗುದ್ದಿಕೊಂಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾರು ಚಾಲಕ, ‘ ಸಿರಿಭೂಮಿ ‘ ಮಣ್ಣಿನ ಪರಿಕರಗಳ ಸಾಮಾಗ್ರಿಗಳ ವ್ಯಾಪಾರಿ ಶ್ಯಾಮ ಪ್ರಕಾಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಒಮ್ನಿ ಮತ್ತು ಲಾರಿಯ ಮುಂಭಾಗಕ್ಕೆ ಡ್ಯಾಮೇಜ್ ಆಗಿದೆ.

ಅಸಮರ್ಪಕ ಬ್ಯಾರಿಕೇಷನ್ ನಡೆದ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಎರಡೂ ವಾಹನಗಳು ಒಮ್ಮೆಲೇ ಚಲಿಸಲು ಸಾಕಷ್ಟು ಸ್ಥಲಾವಕಾಶದ ಕೊರತೆ ಇತ್ತು. ಆಗ ಏಕಕಾಲದಲ್ಲಿ ಎರಡೂ ವಾಹನಗಳನ್ನು ಪಾಸ್ ಮಾಡುಲು ನೋಡಿದಾಗ ಈ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: