ಕಂಬಳದ ಉಸೇನ್ ಬೋಲ್ಟ್ ಗೆ ರಾಜಾಹುಲಿಯಿಂದ ರಾಜಮರ್ಯಾದೆ !
ಕಂಬಳ ಕಣದ ಉಸೇನ್ ಬೋಲ್ಟ್ ಮತ್ತೊಮ್ಮೆ ಭರ್ಜರಿಯಾಗಿ ಓಡಿದ್ದಾರೆ.
ಭಾನುವಾರ ನಡೆದ ವೇಣೂರಿನ 146 ಮೀಟರ್ ದೂರದ ಕಂಬಳದ ಓಟದಲ್ಲಿ ಕೇವಲ 13.68 ಸೆಕೆಂಡುಗಳಲ್ಲಿ ಓಡಿ ಕಂಬಳ ಕನ್ನಡದಲ್ಲಿ ಮತ್ತೆ ದಾಖಲೆ ಬರೆದಿದ್ದಾರೆ.
ಇತ್ತೀಚೆಗೆ ಫೆಬ್ರವರಿ 1 ರಂದು ಮಂಗಳೂರಿನ ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.5 ಮೀಟರಿನ ಕಂಬಳ ಕರೆಯಲ್ಲಿ ಓಡಿದ್ದ ಶ್ರೀನಿವಾಸಗೌಡರು ಮತ್ತು ಕೇವಲ 13.62 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.
ಕಂಬಳದಲ್ಲಿ ಶ್ರೀನಿವಾಸಗೌಡರು ತೋರಿದ ಸಾಧನೆಯನ್ನು ಗಮನಿಸಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ನಿನ್ನೆ ಅಶ್ವತ್ಥಪುರ ಶ್ರೀನಿವಾಸ ಗೌಡರನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉಪಸ್ಥಿತರಿದ್ದರು.
ಅಲ್ಲದೆ ಶ್ರೀನಿವಾಸಗೌಡರಿಗೆ ಮೂರು ಲಕ್ಷದ ಚೆಕ್ಕನ್ನು ಕರ್ನಾಟಕ ಸರ್ಕಾರದ ಪರವಾಗಿ ನೀಡಲಾಯಿತು.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಗೌಡ ರವರು ಶ್ರೀನಿವಾಸಗೌಡರಿಗೆ ಒಂದು ಲಕ್ಷ ನೀಡುವ ಭರವಸೆ ನೀಡಿದರು.
ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಕ್ರೀಡಾ ಮತ್ತು ಯೋಜನ ಸಚಿವ ಕಿರಣ್ ರಿಜಿಜು ಅವರು ಶ್ರೀನಿವಾಸಗೌಡರ ಟ್ಯಾಲೆಂಟ್ ಅನ್ನು ಒರೆಗೆ ಹಚ್ಚುವ ಮತ್ತು ಹೆಚ್ಚಿನ ತರಬೇತಿ ನೀಡುವ ನಿಟ್ಟಿನಲ್ಲಿ ಉತ್ಸುಕರಾಗಿ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು.