ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿ ಆದರ್ಶ ಮೆರೆದ ಮುಸ್ಲಿಂ ದಂಪತಿ

ಕಾಸರಗೋಡು : ಮುಸ್ಲಿಂ ದಂಪತಿ ತಮ್ಮ ಸಾಕು ಮಗಳನ್ನು ಸ್ವಂತ ಮಗಳಂತೆ ಸಾಕಿ-ಸಲಹಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಈ ವಿವಾಹ ಸಮಾರಂಭ ನಡೆದಿದೆ. ಮುಸ್ಲಿಂ ದಂಪತಿಯ ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ ಜೊತೆ ಮದುವೆಯಾಗಿದ್ದಾಳೆ.

ಅಪರೂಪದ ಮದುವೆಗೆ ಹಿಂದೂ ಮತ್ತು ಮುಸ್ಲಿಂ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ವಧು ರಾಜೇಶ್ವರಿ ತಂದೆ, ಅಬ್ದುಲ್ಲಾ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆಕೆಯ ತಾಯಿಯೂ ಕೂಡ ರಾಜೇಶ್ವರಿ ಮಗುವಾಗಿದ್ದಾಗ ಸಾವನ್ನಪ್ಪಿದ್ದರು. ಕೊನೆಗೆ ರಾಜೇಶ್ವರಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಕೊನೆಗೆ ಅಬ್ದುಲ್ಲಾ ಮತ್ತು ಖದೀಜಾ ರಾಜೇಶ್ವರಿಯನ್ನು ದತ್ತು ಪಡೆದರು. ರಾಜೇಶ್ವರಿ, ಅಬ್ದುಲ್ಲಾ ಮತ್ತು ಖದೀಜಾ ಅವರ ಮೂವರು ಗಂಡು ಮಕ್ಕಳಾದ ಶಮೀಮ್, ನಜೀಬ್ ಮತ್ತು ಶೆರೀಫ್ ಅವರೊಂದಿಗೆ ಬೆಳೆದಿದ್ದಳು.

ಮುಸ್ಲಿಂ ದಂಪತಿ ಸಾಕು ಮಗಳನ್ನು ಚೆನ್ನಾಗಿ ಸಾಕಿ, ಶಿಕ್ಷಣವನ್ನೂ ಕೊಡಿಸಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆ ವಿವಾಹ ಕೂಡ ಮಾಡಿಸಿದ್ದಾರೆ. ಜಾತಿ, ಧರ್ಮವನ್ನು ಮೀರಿ ಕೇರಳದ ಕಾಯಂಕುಲಂನ ಮಸೀದಿಯಲ್ಲಿ ರಾಜೇಶ್ವರಿ ಮತ್ತು ವಿಷ್ಣು ಪ್ರಸಾದ್ ಜೋಡಿಯ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಿತ್ತು.

Leave a Reply

error: Content is protected !!
Scroll to Top
%d bloggers like this: