ಮಹಿಳೆ ಸ್ನಾನ ಮಾಡುತ್ತಿರುವಾಗ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ | ಪ್ರಕರಣ ದಾಖಲು

ಇಂದಿನ ಸಮಾಜ ಎಷ್ಟು ನೀಚವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೆಣ್ಣನ್ನು ಗೌರವಿಸಬೇಕಾದ ಜನರು ಇಂತಹ ನೀಚ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ.ಇದೀಗ ಉಳ್ಳಾಲದಲ್ಲಿ ಅಪರಿಚಿತ ವ್ಯಕ್ತಿ ಓರ್ವ ಮಹಿಳೆ ಬಾತ್ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತನ್ನ ಮೊಬೈಲ್ ನಲ್ಲಿ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

 

ಮಹಿಳೆ ತನ್ನ ಮನೆಯ ಬಾತ್ ರೂಮ್ ನಲ್ಲಿ ರಾತ್ರಿ 7.30ರ ವೇಳೆಗೆ ಸ್ನಾನ ಮಾಡುತ್ತಿದ್ದಾಗ ವ್ಯಕಿಯೋರ್ವ ಬಾತ್ ರೂಂ ನ ಕಿಟಕಿಯ ಹೊರಭಾಗದಿಂದ ಮೊಬೈಲ್ ಇರಿಸಿ ವಿಡಿಯೋ ಮಾಡಿದ್ದಾನೆ. ಆಕೆಗೆ ಯಾರೋ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿರುವುದು ತಿಳಿದು ತಕ್ಷಣ ಹೊರ ಬಂದು, ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ.

ಮಹಿಳೆ ಮತ್ತು ಆಕೆಯ ತಾಯಿ ಇಬ್ಬರು ತಮ್ಮ ಮನೆಯ ಹಿಂದೆ ಬಂದು ಗಮನಿಸಿದಾಗ,ಮನೆಯ ಪಕ್ಕದಲ್ಲಿದ್ದ ಬೆಂಚನ್ನು ಬಾತ್ ರೂಂ ಕಿಟಕಿ ಸಮೀಪ ಇರಿಸಿ ಓರ್ವ ವ್ಯಕ್ತಿ ಅದರ ಮೇಲೆ ನಿಂತಿರುವುದು ಕಂಡಿದೆ.

ಆದರೆ ತಾಯಿ ಮತ್ತು ಮಗಳು ಸಮೀಪ ಬರುತ್ತಿರುವುದನ್ನು ನೋಡಿದ ಆ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ . ಈ ಘಟನೆ ಬಗ್ಗೆ‌ ಮಹಿಳೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Leave A Reply

Your email address will not be published.