

ಉಜಿರೆ: ಅತೀ ವೇಗದಿಂದ ಬರುತ್ತಿದ್ದ ಕಾರೊಂದು ಧರ್ಮಸ್ಥಳ ಕಡೆಯಿಂದ ಕಾಲೇಜು ರಸ್ತೆಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಜ.28 (ನಿನ್ನೆ) ರಾತ್ರಿ ನಡೆದಿದೆ.

ಉಜಿರೆ ಬೆಳಾಲು ಕ್ರಾಸ್ ಬಳಿ ಪೇಟೆಯಲ್ಲಿ ಸ್ಕೂಟರ್ ತಾಗಿ, ಡಿವೈಡರ್ಗೆ ಡಿಕ್ಕಿ ಹೊಡೆದು ಕಾರು ಹೊಂಡಕ್ಕೆ ಬಿದ್ದಿದೆ. ಪರಿಣಾಮ ಸ್ಕೂಟರ್ನಲ್ಲಿದ್ದ ಯುವತಿಗೆ ಗಾಯವಾಗಿದ್ದು, ಉಜಿರೆ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲು ಮಾಡಿದ್ದಾರೆ.
ಗುರಿಪಳ್ಳ ಚಾಲಕ ಕಾರನ್ನು ಉಜಿರೆ ಬೆಳಾಲು ಕ್ರಾಸ್ನಿಂದ ತಪ್ಪಿಸಿಕೊಂಡು ಹೋಗಿ ಜನಾರ್ಧನ ಶಾಲೆ ಎದುರಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಯುವಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.













