Home Technology ISRO : ಬಾಹ್ಯಾಕಾಶದಲ್ಲಿ ಪವಾಡ – ರಾಕೆಟ್ ಉಡಾವಣೆ ವಿಫಲವಾದ್ರೂ ಕಕ್ಷೆ ಸೇರಿದ ಉಪಗ್ರಹ

ISRO : ಬಾಹ್ಯಾಕಾಶದಲ್ಲಿ ಪವಾಡ – ರಾಕೆಟ್ ಉಡಾವಣೆ ವಿಫಲವಾದ್ರೂ ಕಕ್ಷೆ ಸೇರಿದ ಉಪಗ್ರಹ

Hindu neighbor gifts plot of land

Hindu neighbour gifts land to Muslim journalist

ISRO: ಕೆಲ ದಿನಗಳ ಹಿಂದೆ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ ‘ಪಿಎಸ್‌ಎಲ್‌ವಿ-ಸಿ62’ ಮಿಷನ್‌ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಬಾಹ್ಯಾಕಾಶದಲ್ಲಿ ಪವಾಡವನ್ನು ನಡೆದಿದೆ. ಅದೇನೆಂದರೆ ರಾಕೆಟ್ ಒಳಗಡೆ ಇದ್ದ ಉಪಗ್ರಹವೊಂದು ಬದುಕುಳಿದಿದ್ದು ಇಸ್ರೋ ಗೆ ಮಾಹಿತಿ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ತಿಳಿಸಿದೆ.

ಹೌದು, ಸೋಮವಾರ 3ನೇ ಹಂತದಲ್ಲಿ ಉಡಾವಣಾ ವೈಫಲ್ಯ ಅನುಭವಿಸಿ ಅದರಲ್ಲಿದ್ದ ಎಲ್ಲ 16 ಉಪಗ್ರಹಗಳು ನಾಪತ್ತೆ ಆಗಿದ್ದವು. ಅವುಗಳು ಆಗಸದಲ್ಲೇ ದಹನ ಆಗಿರಬಹುದು ಎಂಬ ಶಂಕೆ ಇತ್ತು. ಆದರೆ ಇದರ ನಡುವೆ ಸ್ಪಾನಿಷ್‌ ಉಪಗ್ರಹವೊಂದು ಜೀವಂತವಾಗಿದೆ ಹಾಗೂ ನಿರ್ಣಾಯಕ ಡೇಟಾವನ್ನು ಭೂಮಿಗೆ ರವಾನಿಸಿದೆ.

ಸಾಮಾನ್ಯವಾಗಿ ರಾಕೇಟ್ ಉಡಾವಣೆ ವೈಫಲ್ಯವಾದಾಗ ಅದರಲ್ಲಿನ ಉಪಗ್ರಹಗಳು ನಾಶವಾಗುತ್ತವೆ. ಉತ್ತಮ ಸ್ಥಿತಿ ಅಲ್ಲದ ಹಂತಕ್ಕೆ ತಲುಪುತ್ತವೆ. ಭೂಮಿಯೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತವೆ. ಆದರೆ ಈ ಉಡಾವಣೆಯು ವೈಫಲ್ಯವಾದರೂ ಸಹಿತ ಆಶ್ಚರ್ಯಕರ ರೀತಿಯಲ್ಲಿ ‘ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್‌ಸ್ಟ್ರೇಟರ್’ (KID) ಉಪಗ್ರಹ ಉಳಿದಿದೆ. ಸ್ಯಾಟಲೈಟ್ ಬೇರ್ಪಟ್ಟು ಬದುಕಿದ್ದರ ಬಗ್ಗೆ ಡೇಟಾವನ್ನು ಭೂಮಿಗೆ ರವಾನಿಸಿದೆ.

ಅಂದಹಾಗೆ ರಾಕೆಟ್‌ನ ಮೂರನೇ ಹಂತದಲ್ಲಿನ ಅಸಮರ್ಪಕ ಕಾರ್ಯವು ಇಡೀ ಕಾರ್ಯಾಚರಣೆಯನ್ನು ಅಪಾಯಕ್ಕೆ ಸಿಲುಕಿಸಿತು. ಮುಖ್ಯ ಉಪಗ್ರಹಗಳು ನಾಶವಾದಾಗ, ಸ್ಪ್ಯಾನಿಷ್ ಸ್ಟಾರ್ಟ್‌ಅಪ್ ಆರ್ಬಿಟಲ್ ಪ್ಯಾರಡೈಮ್‌ನ “ಕಿಡ್” (ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್‌ಸ್ಟ್ರೇಟರ್) ಕ್ಯಾಪ್ಸುಲ್ ಬೇರ್ಪಡುವಲ್ಲಿ ಯಶಸ್ವಿಯಾಯಿತು. ಅದರ ಮೂಲಮಾದರಿಯು ತೀವ್ರವಾದ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುತ್ತದೆ ಎಂದು ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿದೆ. 

ಸಣ್ಣ ಕ್ಯಾಪ್ಸುಲ್ ಬಾಹ್ಯಾಕಾಶದಿಂದ ಬೀಳುವಾಗ ಸುಮಾರು 28 ಗ್ರಾಂ ಗುರುತ್ವಾಕರ್ಷಣೆಯ ಬಲವನ್ನು ದಾಖಲಿಸಿದೆ. ಈ ಬಲವು ಯಾವುದೇ ಸಾಮಾನ್ಯ ಪೇಲೋಡ್ ಅನ್ನು ನಾಶಮಾಡಲು ಸಾಕು. ಆದಾಗ್ಯೂ, ಕ್ಯಾಪ್ಸುಲ್ ಕಾರ್ಯನಿರ್ವಹಿಸುತ್ತಲೇ ಇತ್ತು ಮಾತ್ರವಲ್ಲದೆ ಮೂರು ನಿಮಿಷಗಳ ಕಾಲ ಟೆಲಿಮೆಟ್ರಿ ಡೇಟಾವನ್ನು ಕಳುಹಿಸಿತು. ಕ್ಯಾಪ್ಸುಲ್‌ನ ಮಾರ್ಗವನ್ನು ಪುನರ್ನಿರ್ಮಿಸಲು ವಿಜ್ಞಾನಿಗಳು ಈಗ ಈ ಡೇಟಾವನ್ನು ಬಳಸುತ್ತಿದ್ದಾರೆ.

ಕೆಐಡಿ ಕ್ಯಾಪ್ಸೊಲ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಪಿಎಸ್ ಎಲ್ ವಿ ಸಿ62 ನೌಕೆಯಿಂದ ಯಶಸ್ವಿಯಾಗಿ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕ್ರಿಯೆಯ 3 ನಿಮಿಷಗಳ ವೀಡಿಯೊ ಇಸ್ರೊಗೆ ಲಭ್ಯವಾಗಿದೆ. ಪತನದ ವೇಳೆ ಅತ್ಯಂತ ಶಾಖ ಹಾಗೂ -28 ಡಿಗ್ರಿಗಿಂತಲೂ ಕಡಿಮೆ ತಪಮಾನ ಎರಡನ್ನೂ ಉಪಗ್ರಹ ಸಹಿಸಿಕೊಂಡಿದೆ. ಒಟ್ಟಿನಲ್ಲಿ ಈ ನಿರಾಶೆಯ ನಡುವೆ, ಸ್ಪ್ಯಾನಿಷ್ ಕ್ಯಾಪ್ಸುಲ್‌ನ ಯಶಸ್ಸು ವಿಜ್ಞಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ.