ಕೃಷಿ ಕಾರ್ಮಿಕರಿಗೆ ಸುರಕ್ಷತೆ | ವಿದ್ಯುತ್ ನಿರೋಧಕ ಏಣಿ ಆವಿಷ್ಕಾರ

ಕೃಷಿ ಕಾರ್ಮಿಕರಿಗೆ ಸುರಕ್ಷತೆ : ವಿದ್ಯುತ್ ನಿರೋಧಕ ಏಣಿ ಆವಿಷ್ಕಾರ

ಪುತ್ತೂರು: ಕೆಲವೆಡೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆಕಸ್ಮಿಕವಾಗಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ಪ್ರಾಣಕಳೆದು ಕೊಂಡ ಘಟನೆ ನಡೆಯುತ್ತಿರುತ್ತದೆ. ಇಂತಹ ದುರ್ಘಟನೆಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಆಲೋಚಿಸಿದ ಸವಣೂರು ಚಿಗುರು ಗ್ರೂಪ್ಸ್ ಸಂಸ್ಥೆಯವರು ನೂತನವಾಗಿ ವಿದ್ಯುತ್ ನಿರೋಧಕ ಏಣಿಗಳನ್ನು ತಯಾರಿಸಲು ಮುಂದಾಗಿ ಈಗ ಯಶಸ್ಸಿಯಾಗಿದ್ದಾರೆ.

ಜಾಹಿರಾತು

ಫೈಬರ್ ನಿಂದ ತಯಾರಿಸಿದ ಏಣಿ ವಿದ್ಯುತ್ ಪ್ರವಹಿಸದಂತೆ ತಡೆಯೊಡ್ಡುತ್ತಿದೆ. ಇವರ ಈ ಆವಿಷ್ಕಾರ ವನ್ನು ಇತ್ತೀಚೆಗೆ ಪೆರ್ಲದ ನಲಂದಾ ವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಕ್ಕೆ ಈ ಏಣಿಗಳನ್ನು ಇಡಲಾಗಿತ್ತು.

ಇದು ‌ರೈತರಿಗೆ ವಿಶೇಷ ಅಕರ್ಷಣೆಗೆ ಕಾರಣವಾಗಿತ್ತು. ಅಲ್ಲದೆ ಈ ಏಣಿಗೆ ಬೇಡಿಕೆ ಕೂಡ ವ್ಯಕ್ತವಾಗಿದೆ. ರೈತರ ಸುರಕ್ಷತೆಯ ದೃಷ್ಟಿಯಿಂದ ಈ‌ ಏಣಿ ಬಳಕೆಗೆ ಉತ್ತಮ. ಇವರ ಪ್ರಯತ್ನಕ್ಕೆ ಶುಭವಾಗಲಿ..

Leave A Reply

Your email address will not be published.