ಕತ್ತಲ ಕೋಣೆಯೊಳಗೆ ಬಂಧಿಯಾಯಿತು ಗಾನ ಕೋಗಿಲೆ!!ಪ್ರಾಧ್ಯಾಪಕನ ಹನಿಟ್ರ್ಯಾಪ್ ಮಾಡಿದ ಆರೋಪದಲ್ಲಿ ಬಂಧಿತರಾದ ಯುವತಿ ಸಹಿತ ನಾಲ್ವರಿಗೆ ಜೀವಾವಧಿ ಶಿಕ್ಷೆ
ಆಕೆ ಕಾಲೇಜಿನಲ್ಲಿ ಖ್ಯಾತ ಗಾಯಕಿ. ಮೈಕ್ ಹಿಡಿದು ವೇದಿಕೆ ಏರಿದಳೆಂದರೆ ಸಾಕು ನೆರೆದಿದ್ದ ಅಷ್ಟೂ ಪ್ರೇಕ್ಷಕರು ಆಕೆಯ ಗಾಯನಕ್ಕೆ ಫಿದಾ ಆಗಿದ್ದರು.ಅದೆಷ್ಟೋ ಬಾರೀ ಬಹುಮಾನಗಳ ಸುರಿಮಳೆಯೇ ಆಕೆಯ ಪಾಲಿಗೆ ದಕ್ಕಿದೆ.ಇದೆಲ್ಲದರ ನಡುವೆ ಹಣ ಮಾಡುವ ಕೆಲಸಕ್ಕಿಳಿದ ಆಕೆಗೆ ಮೊದಲು ಕಂಡದ್ದು ಆಕೆಯ ಕಾಲೇಜಿನ ಪ್ರಾಧ್ಯಾಪಕರು.ಆಕೆಯ ಬಣ್ಣಬಣ್ಣದ ಮಾತಿಗೆ ಮರುಳಾಗಿ ಆ ಲೆಕ್ಚರ್ ಆಕೆಗೆ ಹಣ ನೀಡುತ್ತಿದ್ದ.ಮೊದಮೊದಲು ಸ್ವಲ್ಪ ಸ್ವಲ್ಪ ಹಣವನ್ನು ಪೀಕಿಸುತ್ತಿದ್ದ ಆಕೆ, ಆ ಬಳಿಕ ತನ್ನ ಹೊಸ ಪ್ಲಾನ್ ನ್ನು ಆ ಲೆಕ್ಚರ್ ಮೇಲೆ ಪ್ರಯೋಗಿಸಿ ಸದ್ಯ ಜೈಲು ಕಂಬಿ ಎಣಿಸುತ್ತಿರುವುದು ಮಾತ್ರ ವಿಪರ್ಯಾಸ. ಆಕೆಯ ಅತಿಯಾಸೆ ಹಾಗೂ ಆಕೆ ಹಿಡಿದ ತಪ್ಪು ದಾರಿಯೇ ಆಕೆಯ ಇಂದಿನ ಪರಿಸ್ಥಿತಿಗೆ ಕಾರಣಗಿದೆ.
ಘಟನೆ ವಿವರ:ಹುಬ್ಬಳ್ಳಿಯ ಕಾಲೇಜು ಒಂದರ ವಿದ್ಯಾರ್ಥಿನಿ ಅನಘ ವಡವಿ.ಈಕೆ ಅದ್ಭುತ ಗಾಯಕಿ ಮಾತ್ರವಲ್ಲದೇ ಪಠ್ಯ ವಿಷಯದಲ್ಲಿಯೂ ಅತ್ಯಂತ ಚುರುಕು. ಕಾಲೇಜಿನಲ್ಲಿ ಈಕೆ ಪ್ರಾಧ್ಯಾಪಕನಿಗೆ ಬಲೆ ಬೀಸಿ, ತನ್ನ ಮೋಸದ ಜಾಲಕ್ಕೆ ಆತನನ್ನು ಬೀಳಿಸಿಕೊಂಡಿದ್ದಳು. ಹಲವು ಬಾರೀ ಆ ಪ್ರಾದ್ಯಾಪಕನಿಂದ ಹಣ ಪೀಕಿಸಿದ ಆಕೆ, ತನ್ನ ಅಸಲಿ ಆಟ ಶುರು ಮಾಡಲು ಮುಂದಾಗಿದ್ದಾಳೆ.
ಒಂದು ದಿನ ಲೆಕ್ಚರ್ ನ್ನು ಹನಿಟ್ರ್ಯಾಪ್ ಮಾಡುವ ಬಗ್ಗೆ ಆಕೆ ತನ್ನ ಗೆಳೆಯರೊಂದಿಗೆ ಚರ್ಚಿಸಿದ್ದಳು. ಅದರಂತೆ ಆಕೆ ಪ್ರಾಧ್ಯಾಪಕನನ್ನು ಕಾರವಾರ ರಸ್ತೆಗೆ ಕರೆದುಕೊಂಡು ಹೋಗಿ,ಆತನೊಂದಿಗೆ ಕೊಂಚ ಸಡಿಲವಾಗಿ ಮೈಮರೆತಿದ್ದಾಳೆ. ಮೊದಲೇ ಪ್ಲಾನ್ ಮಾಡಿದ್ದರಂತೆಯೇ ಅಷ್ಟೊತ್ತಿಗೆ ಆಕೆಯ ಗೆಳೆಯರು ಸ್ಥಳಕ್ಕೆ ಬಂದಿದ್ದು, ಅವರು ಬರುತ್ತಿದ್ದಂತೆ ತನ್ನ ಮೇಲೆ ಲೆಕ್ಚರ್ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪವನ್ನು ಮಾಡುತ್ತಾಳೆ. ಬಳಿಕ ಗೆಳೆಯರೊಂದಿಗೆ ಸೇರಿ ಲೆಕ್ಚರ್ ಜೊತೆ ಹಣಕ್ಕೆ ಬೇಡಿಕೆ ಇಟ್ಟರು. ಆತ ಹಣಕೊಡಲೊಪ್ಪದಿದ್ದಾಗ ಹಲ್ಲೆ ನಡೆಸಿ ಎಟಿಎಂ ನಿಂದ ಹಣವನ್ನು ಡ್ರಾ ಮಾಡಿಸಿಕೊಂಡು ಜಾಗ ಖಾಲಿ ಮಾಡಿದ್ದರು.
ಈ ಬಗ್ಗೆ 2017 ರಲ್ಲಿ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಾಲ್ವರು ಆರೋಪಿಗಳ ಬಂಧನವೂ ಆಗಿತ್ತು. ಸದ್ಯ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಆರೋಪಿಗಳಾದ ಅನಘ ಅಡವಿ ಹಾಗೂ ಆಕೆಯ ಗೆಳೆಯರಾದ ಗಣೇಶ್ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ ಹಜಾರೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 17 ಸಾವಿರ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
ಅದೇನೇ ಇರಲಿ ಉದಯೋನ್ಮುಖ ಪ್ರತಿಭೆ, ಉತ್ತಮ ಕಂಠದ ಗಾಯಕಿ ಹಣದಾಸೆಗೆ ಬಿದ್ದು ಐಷರಾಮಿ ಜೀವನ ನಡೆಸುವ ಕನಸಿಗೆ ಬ್ರೇಕ್ ಬಿದ್ದು ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಆಕೆಯ ಅತಿಯಾಸೆ ಆಕೆಯನ್ನು ಸದ್ದಿಲ್ಲದೇ ಜೈಲಿನ ಕೋಣೆಯೊಳಗೆ ಬಂಧಿಯಾಗಿಸಿದೆ.