ಹೊಂಡದಲ್ಲಿ ಬಿದ್ದ ಹುಡುಗನ ರಕ್ಷಿಸಲು ಧಾವಿಸಿದ ಹುಡುಗಿ | ಹುಡುಗನನ್ನು ರಕ್ಷಿಸುವಾಗ ತಾನೇ ಕಾಲು ಜಾರಿ ನೀರು ಪಾಲು

ಯಾದಗಿರಿ: 16 ವರ್ಷದ ಬಾಲಕಿಯೋರ್ವಳು ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಬಾಲಕನ ಜೀವ ಉಳಿಸಿ ತಾನು ಬಲಿಯಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿಯಲ್ಲಿ ನಡೆದಿದೆ.

ಕುರಿಗಾಹಿ ಬಾಲಕನೋರ್ವ ನೀರಿನ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರು ಬಿದ್ದಿದ್ದ. ಇದನ್ನು ಗಮನಿಸಿದ ರಾಜಮ್ಮ ಕುರಿಗಾಹಿಯ ಜೀವ ರಕ್ಷಿಸಲು ಧಾವಿಸಿದ್ದಾಳೆ. ತನ್ನ ಪ್ರಯತ್ನದಲ್ಲಿ ಆ ಹುಡುಗನನ್ನು ರಕ್ಷಿಸಿದ್ದಾಳೆ. ಅಷ್ಟರಲ್ಲಿ ಕಾಲುಜಾರಿ ಸ್ವತಃ ತಾನೇ ಹೊಂಡಕ್ಕೆ ಬಿದ್ದು, ರಾಜಮ್ಮ ನೀರು ಪಾಲಾಗಿದ್ದಾಳೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕುರಿಗಾಹಿಯ ಜೀವ ಉಳಿಸಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿಯ ಕುರಿತು ಇವತ್ತು ಇಡೀ ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಗ್ರಾಮಸ್ಥರು ಬಾಲಕಿಯ ಶವವನ್ನು ಹೊರ ತೆಗೆದಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

error: Content is protected !!
Scroll to Top
%d bloggers like this: