ಟೈರ್ ಸ್ಫೋಟ: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

Share the Article

ಕೊಚ್ಚಿ: ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದ ಟೈರ್ ಸಿಡಿದು, ಕೊಚ್ಚಿಯ ನೆಡುಂಬಸ್ಸರಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ಜರುಗಿದೆ. ಜೆಡ್ಡಾ- ಕೋಯಿಕ್ಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನಲ್ಲಿ ಲ್ಯಾಂಡಿಂಗ್ ಗೇರ್ ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವು ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಎಲ್ಲ 160 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.

ಲ್ಯಾಂಡಿಂಗ್ ನಂತರ ತಪಾಸಣೆ ಸಮಯದಲ್ಲಿ ಟೈರ್‌ಗಳು ಸಿಡಿದಿರುವುದು ಪತ್ತೆಯಾಗಿದೆ. ವಿಮಾನ ನಿಲ್ದಾಣದೊಳಗಿನ ವಿಮಾನದ ಮೂಲಕ ಪ್ರಯಾಣಿಕರನ್ನು ಮತ್ತೊಂದು ಕೋಯಿಕ್ಕೋಡ್‌ಗೆ ತಲುಪಿಸಲಾಯಿತು.

Comments are closed.