ಬೆಳ್ತಂಗಡಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಂಗಡಿ ಮಾಲಕನ ವಿರುದ್ಧ ಕೇಸು ದಾಖಲು

Share the Article

ಬೆಳ್ತಂಗಡಿ: ತನ್ನ ಅಂಗಡಿಗೆ ಸಾಮಾನು ಖರೀದಿ ಮಾಡಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಂಗಡಿ ಮಾಲಕ ಟಿಕ್ಕಾ ಮುಹಮ್ಮದ್‌ ಗೇರುಕಟ್ಟೆ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ದೂರಿನ ಪ್ರಕಾರ, ಕೆಲವು ತಿಂಗಳಿಂದ ಆರೋಪಿ ಬಾಲಕಿಯ ಮೇಲೆ ಮೂರ್ನಾಲ್ಕು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವರದಿಯಾಗಿದ್ದು, ಈ ವಿಷಯ ಯಾರಿಗೂ ತಿಳಿಸದಂತೆ ಬಾಲಕಿಗೆ ಗಂಭೀರ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಬಾಲಕಿ ಒಮ್ಮೆ ಅಂಗಡಿಯೊಳಗೆ ಪ್ರವೇಶ ಮಾಡಿ ಹೊರಬಂದು ಸಿಸಿಟಿವಿ ದೃಶ್ಯಗಳನ್ನು ತಿರುಚಿ ಇವಳು ಕಳ್ಳತನ ಮಾಡಲು ಬಂದಿದ್ದಾಳೆ ಎಂದು ಬಾಲಕಿಯನ್ನೇ ಕಳ್ಳಿ ಎಂದು ಬಿಂಬಿಸಿದ್ದು, ನಂತರ ಆ ದೃಶ್ಯಗಳನ್ನು ಬೇರೆಯವರಿಗೆ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.ನೊಂದ ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಆರೋಪಿ ಮುಹಮ್ಮದ್‌ ಗೇರುಗಟ್ಟೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲು ಮಾಡಲಾಗಿದೆ. ಹಾಗೂ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Comments are closed.