Mobile Recharge: ಜಿಯೋ, ಏರ್‌ಟೆಲ್ ಕಂಪನಿಗಳ ರಿಚಾರ್ಜ್ ಬೆಲೆ ಹೆಚ್ಚಳ!

Share the Article

Mobile Recharge: ಜಿಯೋ, ಏರ್‌ಟೆಲ್ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪನಿಗಳು (Telecom Companies) ಬಳಕೆದಾರರಿಗೆ ಶಾಕ್‌ ನೀಡಲು ಮುಂದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮೊಬೈಲ್‌ ರೀಚಾರ್ಜ್‌ (Mobile Recharge) ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಹೌದು, ಇತ್ತೀಚೆಗೆ ಜಿಯೋ ಹೊರತುಪಡಿಸಿ ಎಲ್ಲಾ ಕಂಪನಿಗಳು ತಮ್ಮ ಯೋಜನೆಗಳನ್ನು ಹೆಚ್ಚಿಸಿವೆ. ಇದರಿಂದ ಅವುಗಳ ಬೆಲೆಗಳು ಮತ್ತೆ ಏರಿಕೆಯಾಗಲಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ) ಸುಂಕಗಳನ್ನು ಹೆಚ್ಚಿಸಲಿದೆ. ಇದು ಮೊಬೈಲ್ ಬಳಕೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ರೀಚಾರ್ಜ್ ಪ್ಲ್ಯಾನ್‌ಗಳಿಹೆ ಹೆಚ್ಚಿನ ಹಣ ವ್ಯವಯಿಸಬೇಕಾಗಿ ಬರುತ್ತದೆ.ಕಳೆದ ಕೆಲವು ತಿಂಗಳುಗಳಿಂದ ಟೆಲಿಕಾಂ ಕಂಪನಿಗಳ ಆದಾಯ ಕುಸಿಯುತ್ತಿದ್ದು, ಕಂಪನಿಗಳ ಆದಾಯ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 10% ಗೆ ಇಳಿದಿದೆ. ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದು 14-16% ರಷ್ಟಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಹೀಗಾಗಿ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದೆ.ವರದಿಗಳ ಪ್ರಕಾರ ಒಟ್ಟಾರೆ ಸುಂಕಗಳು 15% ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ನಿರಂತರ ಹಣದುಬ್ಬರ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರಮುಖ ಚುನಾವಣೆಗಳ ಅನುಪಸ್ಥಿತಿಯಿಂದಾಗಿ, ಟೆಲಿಕಾಂ ಕಂಪನಿಗಳು ಡಿಸೆಂಬರ್‌ನಲ್ಲಿ ಸುಂಕಗಳನ್ನು ಹೆಚ್ಚಿಸಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ. ಪರಿಣಾಮವಾಗಿ 28 ದಿನಗಳ ಮಾನ್ಯತೆಯ ಯೋಜನೆಯು ಸುಮಾರು 50ರೂ. ಯಷ್ಟು ದುಬಾರಿಯಾಗಬಹುದು.ಕಳೆದ ತಿಂಗಳು, ವಿಐ ತನ್ನ 1,999 ರೂ. ವಾರ್ಷಿಕ ಯೋಜನೆಯ ಬೆಲೆಯನ್ನು12% ರಷ್ಟು ಮತ್ತು ಅದರ 84 ದಿನಗಳ ಯೋಜನೆಯ ಬೆಲೆಯನ್ನು 7% ರಷ್ಟು ಹೆಚ್ಚಿಸಿತು. ಅದೇ ರೀತಿ ಭಾರ್ತಿ ಏರ್‌ಟೆಲ್ ತನ್ನ ಅಗ್ಗದ ವಾಯ್ಸ್ ಓನ್ಲಿ ಯೋಜನೆಯನ್ನು 189 ರೂ. ಯಿಂದ 199ರೂ.ಗೆ ಏರಿಸಿತು.

Comments are closed.