Bike: ಎರಡು ದೈತ್ಯ ಕಂಪನಿಗಳು ಒಂದಾಗಿ ಬಿಡುಗಡೆ ಮಾಡಿವೆ ಈ ಹೊಸ ಬೈಕ್!

Share the Article

Bike: ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಹಾರ್ಲೆ – ಡೇವಿಡ್ಸನ್ H-D X440 T, ಹೊಸ ಅಪ್‌ಡೇಟ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಭಾರತದಲ್ಲಿ ಹಾರ್ಲೆ – ಡೇವಿಡ್ಸನ್ ಮತ್ತು ಹೀರೋ ಪ್ರೀಮಿಯಾ ಡೀಲರ್ ನೆಟ್‌ವರ್ಕ್‌ನಲ್ಲಿ ಈಗಾಗಲೇ ಬುಕಿಂಗ್ ‌ಗಳನ್ನು ಸ್ವೀಕರಿಸಲಾಗುತ್ತಿದೆ. ಈ ಬೈಕ್ ಕುರಿತ ಹೆಚ್ಚಿನ ವಿಶೆಷತೆಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಹೊಸ ಹಾರ್ಲೆ – ಡೇವಿಡ್ಸನ್ H-D X440 T ಆರಂಭಿಕ ಬೆಲೆ ರೂ. 2,79,500 (ಎಕ್ಸ್ – ಶೋರೂಂ), H-D X440 S ವೇರಿಯೆಂಟ್ ಆರಂಭಿಕ ಬೆಲೆ ರೂ. 2,54,900 (ಎಕ್ಸ್-ಶೋರೂಂ) ಮತ್ತು H-D X440 ವಿವಿಡ್ ವೇರಿಯೆಂಟ್ ಆರಂಭಿಕ ಬೆಲೆ ರೂ. 2,34,500 (ಎಕ್ಸ್-ಶೋರೂಂ) ಇದೆ. ಈ ಬೈಕ್ ಹೈ- ಪರ್ಫಾಮೆನ್ಸ್ ಹಾಗೂ ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಸವಾರರಿಗೆ ಉತ್ತಮ ರೈಡ್ ಅನುಭವ ನೀಡುತ್ತದೆ.

ಹೊಸ ಹಾರ್ಲೆ – ಡೇವಿಡ್ಸನ್ X440 T ಅಪ್‌ಡೇಟ್‌ಗಳು: ಉತ್ತಮ ಪಿಲಿಯನ್ ಸವಾರಿಗಾಗಿ ಸಂಪೂರ್ಣವಾಗಿ ಹೊಸ ಟೈಲ್ ವಿಭಾಗ ಮತ್ತು ಗ್ರಾಬ್ ಹ್ಯಾಂಡಲ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಹಿಂಭಾಗದ ಸಬ್-ಫ್ರೇಮ್ ಜೊತೆಗೆ ಹೊಸ ರೈಡ್ ಮೋಡ್‌ಗಳು (ರೋಡ್ ಮತ್ತು ರೈನ್) ನೀಡಲಾಗಿದೆ. ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಸ್ವಿಚ್ ಮಾಡಬಹುದಾದ ABS (ಹಿಂಭಾಗ ಮಾತ್ರ) ಹೊಂದಿರುವ ರೈಡ್ ಬೈ ವೈರ್ ಪರಿಚಯಿಸಲಾಗಿದೆ.

H-D X440 T ಪರಿಚಯ: ಹಾರ್ಲೆ – ಡೇವಿಡ್ಸನ್ X440 ಯಶಸ್ಸಿನ ನಂತರ, ಎರಡೂ ಕಂಪನಿಗಳು (ಹೀರೋ – ಹಾರ್ಲೆ) ಪ್ರಸ್ತುತ X440 ಸಿರೀಸ್ ಅನ್ನು ಜಾರಿಗೆ ಪರಿಚಯಿಸಿವೆ. ಮೊದಲ ಬಾರಿಗೆ ಜುಲೈ 2023 ರಲ್ಲಿ ಹಾರ್ಲೆ – ಡೇವಿಡ್ಸನ್ X440 ಬೈಕ್ ಬಿಡುಗಡೆ ಮಾಡಲಾಗಿತ್ತು. ಮೊದಲ ದಿನದಿಂದಲೇ ಅದ್ಭುತ ಯಶಸ್ಸನ್ನು ಸಾಧಿಸಿದ್ದು, ಭಾರತದಲ್ಲಿ ಹಾರ್ಲೆ – ಡೇವಿಡ್ಸನ್ ಸಮುದಾಯಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಹೊಸ ಹಾರ್ಲೆ-ಡೇವಿಡ್ಸನ್ X440 T ಬೈಕ್ ತನ್ನ ಸ್ಟ್ತಾಂಡರ್ಡ್ ಮಾಡಲ್‌ X440 ನಂತೆಯೇ 440cc, ಸಿಂಗಲ್-ಸಿಲಿಂಡರ್, ಏರ್/ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 27hp ಪವರ್ ಮತ್ತು 38Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮೂಲಕ ಪವರ್ ಔಟ್‌ಪುಟ್‌ ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸೂಚಿಸುತ್ತದೆ.ಹೊಸ ಹಾರ್ಲೆ-ಡೇವಿಡ್ಸನ್ X440 T ಬೈಕ್ ಅದೇ ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ರೌಂಡ್ ಶೇಪ್ LED ಹೆಡ್‌ಲ್ಯಾಂಪ್ ಮತ್ತು ಸಿಂಗಲ್ – ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಇದು ಸಿಂಗಲ್ – ಪೀಸ್ ಸೀಟ್, ಬಾರ್ – ಎಂಡ್ ಮಿರರ್‌ಗಳು, ಅಲಾಯ್ ವೀಲ್‌ಗಳು ಮತ್ತು ಸಿಂಗಲ್ ಸೈಡ್ – ಮೌಂಟೆಡ್ ಎಕ್ಸಾಸ್ಟ್‌ನೊಂದಿಗೆ ಸಜ್ಜುಗೊಂಡಿದೆ.

Comments are closed.