Washington: ಉದ್ಯಮಿ ಮಸ್ಕ್ ಅಚ್ಚರಿ ಹೇಳಿಕೆ: 5 – 10 ವರ್ಷದೊಳಗೆ ಪರಮಾಣು ಯುದ್ಧ

Washington: ಬರುವ 5 ಅಥವಾ 10 ವರ್ಷಗಳ ಒಳಗೆ ವಿಶ್ವದಲ್ಲಿ ಪರಮಾಣು ಯುದ್ಧವಾಗಲಿದೆ ಎಂದು ವಿಶ್ವದ ನಂಬರ್ 1 ಶ್ರೀಮಂತ, ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ.ಟ್ವೀಟರ್ ಬಳಕೆದಾರರ ಒಬ್ಬರು ಮಾಡಿದ ಪೋಸ್ಟ್ಗೆ ಮಸ್ಕ್ ಈ ರೀತಿ ಕಮೆಂಟ್ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಆ ಬಳಕೆದಾರರು, ‘ವಿಶ್ವದ ಪ್ರಮುಖ ಶಕ್ತಿಗಳ ಬಳಿ ಪರಮಾಣು ಅಸ್ತ್ರಗಳಿದ್ದು, ಅವು ಯುದ್ಧದ ಸಂಭಾವ್ಯ ಬೆದರಿಕೆಯನ್ನು ತಡೆಯುವ ಕಾರಣ ಈಗ ಸರಕಾರಗಳು ನೆಮ್ಮದಿಯಿಂದಿವೆ’ ಎಂದು ಬರೆದುಕೊಂಡಿದ್ದಾರೆ.ಈ ಟ್ವೀಟ್ ಗೆ ಚಿಕ್ಕದಾಗಿ ಪ್ರತಿಕ್ರಿಯೆ ನೀಡಿರುವ elaan ‘ಯುದ್ಧಗಳನ್ನು ತಡೆಯಲು ಸಾಧ್ಯ. ಇನ್ನು ಹೆಚ್ಚೆಂದರೆ 5 ರಿಂದ 10 ವರ್ಷ’ ಅಂತ ಚಿಕ್ಕದಾಗಿ ಉತ್ತರ ಕೊಟ್ಟಿದ್ದಾರೆ.
ಮಸ್ಕ್ ರವರ ಈ ಹೇಳಿಕೆ ಬಗ್ಗೆ ಇದೀಗ ಹಲವು ಚರ್ಚೆಗಳಾಗುತ್ತಿವೆ.ಕೆಲವರು, ಮಸ್ಟ್ರದ್ದೇ ಒಡೆತನದ ಟ್ವಿಟರ್ನ ಎಐ ಚಾಟ್ ಬಾಟ್ ಬಳಿ ಈ ಬಗ್ಗೆ ವಿವರಣೆ ಕೇಳಿದ್ದು ಅದು ಸಮಜಾಯಿಯ ಉತ್ತರ ನೀಡಿದೆ. “ಮಸ್ಕ್ ಹೇಳಿಕೆಯ ಹಿಂದೆ ಅಮೆರಿಕ-ಚೀನ- ಯುರೋಪ್ ಆಂತರಿಕ ಸಮಸ್ಯೆ, ರಷ್ಯಾ-ಉಕ್ರೇನ್ ಸೇರಿ ಹಲವು ವಿಚಾರಗಳಿವೆ” ಎಂದು ಬುದ್ಧಿವಂತ ವಿಶ್ಲೇಷಿಸಿದ್ದಾನೆ.
Comments are closed.