DoT: ಸಿಮ್ ಇದ್ದರಷ್ಟೇ ಸೇವೆಗಳನ್ನು ನೀಡಬೇಕು – ವಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಸಂವಹನ ಅಪ್ಲಿಕೇಶನ್ ಗಳಿಗೆ ಸರ್ಕಾರ ಆದೇಶ

Share the Article

DoT: ದೇಶಾದ್ಯಂತ ಅಸ್ತಿತ್ವದಲ್ಲಿರುವ ಸಂವಹನ ಅಪ್ಲಿಕೇಶನ್ ಗಳಿಗೆ ಕೇಂದ್ರ ಸರ್ಕಾರವು ಖಡಕ್ ಸಂದೇಶವನ್ನು ರವಾನಿಸಿದ್ದು ಇನ್ನು ಮುಂದೆ ಸಿಮ್ ಇದ್ದರೆ ಮಾತ್ರ ಸೇವೆಗಳನ್ನು ನೀಡಬೇಕು ಎಂದು ತಿಳಿಸಿದೆ.

ಹೌದು, ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್ ಮತ್ತು ಆರತಿಯಂತಹ ಸಂವಹನ ಅಪ್ಲಿಕೇಶನ್‌ಗಳಿಗೆ ಕೇಂದ್ರವು ಪ್ರಮುಖ ಆದೇಶಗಳನ್ನು ಹೊರಡಿಸಿದ್ದು, ಸಾಧನದಲ್ಲಿ ಸಿಮ್ ಕಾರ್ಡ್ ಇದ್ದರೆ ಮಾತ್ರ ಅಪ್ಲಿಕೇಶನ್ ಸೇವೆಗಳನ್ನು ಸಕ್ರಿಯಗೊಳಿಸಬೇಕು ಎಂದು ದೂರಸಂಪರ್ಕ ಇಲಾಖೆ (DoT) ಸೂಚನೆ ನೀಡಿದೆ (ಸಿಮ್ ಬೈಂಡಿಂಗ್).

ಸಂವಹನ ಅಪ್ಲಿಕೇಶನ್‌ಗಳು ಯಾವಾಗಲೂ ಸಿಮ್ ಕಾರ್ಡ್‌ಗೆ ಲಿಂಕ್ ಆಗಿರುವುದನ್ನು ಮತ್ತು ದುರುಪಯೋಗವಾಗದಂತೆ ನೋಡಿಕೊಳ್ಳುವ ಗುರಿಯನ್ನು ಇತ್ತೀಚಿನ ಕ್ರಮಗಳು ಹೊಂದಿವೆ ಎಂದು DoT ತಿಳಿಸಿದೆ. ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳು-2025 ರ ಭಾಗವಾಗಿ ಅಪ್ಲಿಕೇಶನ್ ಆಧಾರಿತ ಸಂವಹನ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ ಈ ಆದೇಶಗಳನ್ನು ನೀಡಲಾಗಿದೆ.

Comments are closed.