Puttur: ಪುತ್ತೂರು: ನೇಣು ಬಿಗಿದು ಯುವತಿ ಆತ್ಮಹತ್ಯೆ!

Share the Article

Puttur: ಕೆಯ್ಯುರು ಗ್ರಾಮದ ಪೊಯೊಳೆ ನಿವಾಸಿ ಸುಮತಿ ಅವರ ಪುತ್ರಿ ನೀತಾ(22ವ) ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಘಟನೆ ಕುರಿತು ಮೃತರ ಅಕ್ಕ ಗೀತಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

‘ತಂದೆ ಗುಡ್ಡಪ್ಪ ರೈಯವರು ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಕಾರಣದಿಂದ ದೂರವಿದ್ದುದರಿಂದ ಮನೆಯಲ್ಲಿ ತಾಯಿ ಮತ್ತು ಅಕ್ಕತಂಗಿ ಮಾತ್ರ ಇರುವುದಾಗಿದೆ.

ನ.23ರಂದು ಬೆಳಿಗ್ಗೆ ತಾನು ಕೆಲಸದ ನಿಮಿತ್ತ ಮತ್ತು ತಂಗಿಗೆ ಔಷಧಿಯನ್ನು ತರಲೆಂದು ಮಂಗಳೂರಿಗೆ ಹೊರಟು ಮನೆಯ ಎದುರು ಬಾಗಿಲಿನ ಚಿಲಕ ಹಾಕಿ ಬೀಗ ಹಾಕಿ ಹೋಗಿದ್ದೆ. ತಂಗಿ ನೀತಾ ಮನೆಗೆ ಒಳಗಿನಿಂದ ಹಿಂಬಾಗಿಲಿನ ಚಿಲಕವನ್ನು ಹಾಕಿ ಬಂದ್ ಮಾಡಿಕೊಂಡಿದ್ದು ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿ ಮಾಹಿತಿ ನೀಡಿರುತ್ತಾರೆ ಎಂದು ತಿಳಿಸಿದ್ದರು.ತಾನು ಸಂಜೆ 6.30 ಗಂಟೆಯ ಸಮಯಕ್ಕೆ ಮನೆಗೆ ಬಂದು ಮನೆಯ ಎದುರು ಬಾಗಿಲಿನ ಬೀಗ ಹಾಗೂ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ನೀತಾಳು ಮಲಗುವ ಕೋಣೆಗೆ ಹೋಗಿ ನೋಡಿದಾಗ ಆಕೆ ಶಾಲಿನ ಒಂದು ತುದಿಯನ್ನು ಕಿಟಕಿಯ ಸರಳಿಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಳು.ಹೊರಗೆ ಹೋದ ತಾಯಿ ಆ ಸಮಯ ಮನೆಗೆ ಬಂದಿರುವುದಾಗಿದೆ. ಮೃತ ನೀತಾಳು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು 2016ರ ನಂತರ ಆಕೆಗೆ ತಲೆನೋವು ಆರಂಭವಾಗಿ ಚಿಕಿತ್ಸೆ ಮಾಡಿದರು 2020ರ ನಂತರ ಕುತ್ತಿಗೆ, ಬೆನ್ನುಹುರಿ ಮತ್ತು ತಲೆಯಲ್ಲಿ ನರ ದೋಷ ಉಂಟಾದ ಕಾರಣ ಕೆಎಂಸಿ ಮಂಗಳೂರು, ಎಜೆ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಮಾಡಿದ್ದು ಪ್ರಸ್ತುತ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಎಸ್‌ಡಿಎಂ ಆಯುರ್ವೇದಿಕ್‌ ಆಸ್ಪತ್ರೆ ಉದ್ಯಾವರದಲ್ಲಿ ಸುಮಾರು 9 ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದು ಬಳಿಕ ಸ್ವಲ್ಪ ಚೇತರಿಕೆ ಆಗಿ ಮನೆಯ ಆಸುಪಾಸಿನಲ್ಲಿ ನಡೆದಾಡುತ್ತಿದ್ದಳು.ತಂದೆ ತಾಯಿ ಸರಿಯಾಗಿ ನೋಡದೇ, ಆರೈಕೆ ಮಾಡದೇ, ಔಷಧಿ ನೀಡದೇ ಇದ್ದುದರಿಂದ ಹಾಗೂ ಆಕೆಯ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಪೆ ಹೊಂದಿ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ..

Comments are closed.