Bar: ಇನ್ನು ಮುಂದೆ ಗ್ರಾಹಕರು ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಾರ್‌ಗಳ ಮೇಲೂ ಕಾನೂನು ಕ್ರಮ

Share the Article

Bar: ಯಾವುದೇ ವ್ಯಕ್ತಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಮದ್ಯ ಮಾರಾಟ ಮಾಡಿದ ಬಾರ್‌ ಜೊತೆಗೆ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಹರಿಯಾಣದ ಗುರುಗ್ರಾಮದ ಪೊಲೀಸರು ಮುಂದಾಗಿರುವ ಕುರಿತು ವರದಿಯಾಗಿದೆ.

ಈ ಕುರಿತು ನಗರದ ಎಲ್ಲಾ ಬಾರ್‌ಗಳು ಮತ್ತು ಕ್ಲಬ್‌ಗಳಿಗೆ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ಗ್ರಾಹಕರು ಮದ್ಯದ ಅಮಲಿನಲ್ಲಿದ್ದಾಗ ವಾಹನ ಚಲಾಯಿಸಿಕೊಂಡು ಹೋಗದಂತೆ ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ತುಂಬಾ ಮದ್ಯ ಸೇವಿಸಿರುವ ಗ್ರಾಹಕರನ್ನು ಬಾರ್‌ನ ಬೌನ್ಸರ್‌ಗಳು ಇಲ್ಲ ಸಿಬ್ಬಂದಿ ಗುರುತಿಸಬೇಕು ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಲು ಅನುವಾಗುವಂತೆ ಟ್ಯಾಕ್ಸಿಯಂತಹ ಸಾರಿಗೆ ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂದು ಸೂಚನೆ ನೀಡಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಹರಿಯಾಣ ಪೊಲೀಸ್‌ ಮುಖ್ಯಸ್ಥ ಒ.ಪಿ.ಸಿಂಗ್‌, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 168 ರ ಅಡಿಯಲ್ಲಿ ಈ ನೋಟಿಸನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಿರ್ದೇಶನ ಮೀರುವ ಬಾರ್‌ಗಳು ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಬೇಕು ಎಂದು ಕೂಡಾ ಎಚ್ಚರಿಕೆ ನೀಡಿದ್ದಾರೆ.

Comments are closed.