Temple: ದೇವಾಲಯದ ನವೀಕರಣದ ವೇಳೆ ಪ್ರಾಚೀನ ಚಿನ್ನದ ನಾಣ್ಯ ಪತ್ತೆ

Share the Article

 

Temple: ತಮಿಳುನಾಡಿನ ಕೋವಿಲೂರಿನಲ್ಲಿ ನವೀಕರಣ ಹಂತದಲ್ಲಿದ್ದ ಶಿವನ ದೇವಾಲಯದ ಗರ್ಭಗುಡಿಯ ಕಾರ್ಯ ನಡೆಯುತ್ತಿದ್ದಾಗ, ಅಕಸ್ಮಾತ್ತಾಗಿ ಮಣ್ಣಿನ ಮಡಕೆಯೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ 103 ಪ್ರಾಚೀನ ಚಿನ್ನದ ನಾಣ್ಯಗಳು ದೊರೆತಿವೆ. ತಕ್ಷಣವೇ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೋಲೂರು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವಂತೆ, ಈ ದೇವಾಲಯವು ಶತಮಾನಗಳಷ್ಟು ಹಳೆಯದಾಗಿದ್ದು, ಚೋಳ ರಾಜ ರಾಜರಾಜ ಚೋಳನ್ III ರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಸದ್ಯ ದೊರೆತಿರುವ ಚಿನ್ನದ ನಾಣ್ಯಗಳ ಕುರಿತು ಕಂದಾಯ ಇಲಾಖೆ ಮತ್ತು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಈ ನಾಣ್ಯಗಳ ಇತಿಹಾಸವನ್ನು ಪತ್ತೆಹಚ್ಚಲಿದ್ದು, ಈ ವಿಷಯದ ಕುರಿತು ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments are closed.