Electric vehicle: ಎಲೆಕ್ಟ್ರಿಕ್ ಬೈಕ್ ಮತ್ತು ಕಾರು ಹೊಂದಿರುವವರಿಗೆ ಶಾಕಿಂಗ್ ನ್ಯೂಸ್!!

Share the Article

Electric vehicle: ಇಂದು ಇಡೀ ಪ್ರಪಂಚವೇ ಎಲೆಕ್ಟ್ರಿಕ್ ಮಯವಾಗುತ್ತಿದೆ. ಎಲೆಕ್ಟ್ರಿಕ್ ಬಸ್ಸು, ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ರೈಲುಗಳು ಕೂಡ ಎಲೆಕ್ಟ್ರಿಕ್ ಆಗಿಬಿಟ್ಟಿದೆ. ಜನರು ಕೂಡ ಇಂದು ಎಲೆಕ್ಟ್ರಿಕ್ ವಾಹನಗಳ ಕಡೆ ವಾಲುತ್ತಿದ್ದಾರೆ. ಆದರೆ ಇದೀಗ ಎಲೆಕ್ಟ್ರಿಕ್ ಬೈಕ್ ಮತ್ತೆ ಕಾರು ಬಳಸುವವರಿಗೆ ಶಾಕ್ ಎದುರಾಗಿದೆ.

ಹೌದು, ಪ್ರಪಂಚದಾದ್ಯಂತ ಅವುಗಳನ್ನ ಬಳಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈಗ ಭಾರತದಲ್ಲೂ ಈ ಸಂಖ್ಯೆ ಹೆಚ್ಚಾಗಿದೆ. ಆದರೆ ನೀವು ಎಲೆಕ್ಟ್ರಿಕ್ ವಾಹನಗಳನ್ನ ಖರೀದಿಸಿದರೂ ಸಹ, ಅವುಗಳನ್ನ ಮರುಮಾರಾಟ ಮಾಡುವುದು ಕಷ್ಟ ಎಂಬ ವಾದವಿದೆ. ಇದಕ್ಕೆ ಉದಾಹರಣೆಯೆಂದರೆ ಭಾರತೀಯ ಎಲೆಕ್ಟ್ರಿಕ್ ಕ್ಯಾಬ್ ಕಂಪನಿ ಬ್ಲೂಸ್ಮಾರ್ಟ್.

ಬ್ಲೂಸ್ಮಾರ್ಟ್ ಕಂಪನಿಯು ಹಣಕಾಸಿನ ತೊಂದರೆಗಳನ್ನ ಎದುರಿಸಿದ್ದು, ತಕ್ಷಣವೇ ತನ್ನ ವಾಹನಗಳನ್ನ ಮಾರಾಟಕ್ಕೆ ಇಟ್ಟಿತು. ಆ ಎಲ್ಲಾ ಕಾರುಗಳು ಸಹ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿವೆಯಾದ್ರೂ ಅವುಗಳನ್ನ ಕಾರಿನ ಬೆಲೆಯ ಕಾಲು ಭಾಗಕ್ಕೆ ಮಾತ್ರ ಮಾರಾಟ ಮಾಡಲಾಯಿತು. ಇದರಿಂದ ನೀವು ಈ ಕಾರುಗಳನ್ನ ಖರೀದಿಸಿದರೂ ಸಹ, ಅವುಗಳ ಮರುಮಾರಾಟ ಮಾಡುವುದು ಕಷ್ಟ ಎನ್ನಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗೆ ಪ್ರಮುಖ ಕಾರಣ ಅದರಲ್ಲಿ ಬಳಸುವ ಬ್ಯಾಟರಿ. ವಿದ್ಯುತ್ ಚಾಲಿತ ಕಾರಿನ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಬ್ಯಾಟರಿಗೆ ಖರ್ಚು ಮಾಡಲಾಗುತ್ತದೆ. ಕಾರು ಹಳೆಯದಾಗುತ್ತಿದ್ದಂತೆ ಬ್ಯಾಟರಿ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಅದನ್ನ ಆಗಾಗ ಚಾರ್ಜ್ ಮಾಡಬೇಕಾಗಬಹುದು. ಅಥವಾ ಅದು ಆಗಾಗ ಬಿಸಿಯಾಗಬಹುದು. ನೀವು ಸೆಕೆಂಡ್ ಹ್ಯಾಂಡ್ ಗಾಡಿಯನ್ನು ಮಾರಾಟ ಮಾಡಲು ಇಚ್ಚಿಸಿದಾಗ ಕೊಳ್ಳುವವರು ಅದರ ಇಂಜಿನ್ ಸಾಮರ್ಥ್ಯವನ್ನು ಚೆಕ್ ಮಾಡುತ್ತಾರೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸಾಮರ್ಥ್ಯ ಕಡಿಮೆ ಇರುವುದು ಕಂಡು ಬರುತ್ತಿದೆ. ಹೀಗಾಗಿ ಆ ಬ್ಯಾಟರಿಗಳಿಂದ ವಿದ್ಯುತ್ ವಾಹನಗಳ ಬೆಲೆಗಳು ಕಡಿಮೆಯಾಗುತ್ತಿವೆ ಎಂದು ತೋರುತ್ತದೆ. ಅನೇಕ ಜನರು ಅವುಗಳನ್ನ ಸೆಕೆಂಡ್ ಹ್ಯಾಂಡ್ ಆಗಿ ಖರೀದಿಸಲು ಹಿಂಜರಿಯುತ್ತಾರೆ ಎನ್ನಲಾಗುತ್ತಿದೆ.

Comments are closed.